ದುಬೈ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಅಭಿಯಾನ ನಿರಾಶದಾಯಕವಾಗಿ ಅಂತ್ಯವಾಗಿದೆ. ಸೆಮಿ ಫೈನಲ್ ಪ್ರವೇಶಿಸಲು ವಿಫಲವಾದ ಟೀಂ ಇಂಡಿಯಾ ಇಂದು ನಮೀಬಿಯಾ ವಿರುದ್ಧ ತನ್ನ ಅಂತಿಮ ಸೂಪರ್ 12 ಪಂದ್ಯವಾಡಲಿದೆ.
ತಂಡದ ಈ ಪ್ರದರ್ಶನದ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಕೂಡಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಭಾರತ ತಂಡದಲ್ಲಿ ಬೌಲಿಂಗ್ ಮಾಡಬಲ್ಲ ಬ್ಯಾಟ್ಸಮನ್ ಗಳ ಅಗತ್ಯವಿದೆ ಎಂದಿದ್ದಾರೆ.
ಮುಂದಿನ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾರಣ, ಅಲ್ಲಿನ ಪರಿಸ್ಥಿತಿಗೆ ವೇಗದ ಬೌಲಿಂಗ್ ಮಾಡಬಲ್ಲ ಬ್ಯಾಟ್ಸಮನ್ ಗಳ ಅಗತ್ಯವಿದೆ. ಒಂದೆರಡು ಬ್ಯಾಟ್ಸಮನ್ ಗಳು ಬೌಲಿಂಗ್ ಮಾಡಬಲ್ಲವರಾಗಿದ್ದರೆ, ಫ್ರಂಟ್ ಲೈನ್ ಬೌಲರ್ ಗಳಿಗೆ ನೆರವಾಗುತ್ತದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಇದನ್ನೂ ಓದಿ:ಕೆಲವರಿಗೆ ದೇಶಕ್ಕಿಂತ ಐಪಿಎಲ್ ಆಟವೇ ಮುಖ್ಯ: ವಿಶ್ವಕಪ್ ಸೋಲಿಗೆ ಕಾರಣ ಬಿಚ್ಚಿಟ್ಟ ಕಪಿಲ್ ದೇವ್
ಇನ್ನೊಂದು ಪ್ರಮುಖ ಅಂಶವೆಂದರೆ ಬೌಲಿಂಗ್ ಮಾಡುವ ಬ್ಯಾಟ್ಸ್‌ಮನ್‌ಗಳನ್ನು ಗುರುತಿಸುವುದು, ಯಾಕೆಂದರೆ ನೀವು ಆರನೇ ಅಥವಾ ಏಳನೇ ಬೌಲಿಂಗ್ ಆಯ್ಕೆಯನ್ನು ಹೊಂದಿದ್ದರೆ, ನಾಯಕನು ಖಂಡಿತವಾಗಿಯೂ ಒತ್ತಡಕ್ಕೆ ಒಳಗಾಗುವುದಿಲ್ಲ. ಆದ್ದರಿಂದ, ಎರಡು ಓವರ್ ಗಳನ್ನು ಹಾಕಬಲ್ಲ ಒಂದೆರಡು ಬ್ಯಾಟ್ಸ್‌ಮನ್ ಗಳು ತಂಡದಲ್ಲಿರಬೇಕು, ಅದು ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್‌ಗೆ ಬಹಳ ನಿರ್ಣಾಯಕವಾಗಿರುತ್ತದೆ ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಲಕ್ಷ್ಮಣ್ ಹೇಳಿದರು.