Advertisement
ಹೌದು, ಈ ಕುರಿತಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಆ ಪ್ರಕಾರ, 1,400 ಕಿ.ಮೀ ಉದ್ದದ ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಇನ್ನೇನು ಬಹುಪಾಲು ಸಂಪೂರ್ಣಗೊಂಡಿದೆ. ಶೀಘ್ರವೇ ಇದನ್ನು ಪೂರ್ಣಗೊಳಿಸಿ, ಸೇವೆಗೆ ಲಭ್ಯಗೊಳಿಸುವುದಾಗಿ ಗಡ್ಕರಿ ತಿಳಿಸಿದ್ದಾರೆ.
ಭಾರತ ಹಾಗೂ ಮ್ಯಾನ್ಮಾರ್ ನಡುವೆ ಸ್ನೇಹ ಪೂರ್ವಕವಾಗಿ ಈ ಹೆದ್ದಾರಿ ನಿರ್ಮಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ 2022ರಲ್ಲಿ ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ಸಚಿವರ ಮಟ್ಟದ ಮಾತುಕತೆ ಪೂರ್ಣಗೊಳಿಸಲಾಯಿತು. ಬಳಿಕ 2019ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಭಾರತ ಯೋಜಿಸಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಮತ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ.