Advertisement

Men’s Junior Asia Cup: ಗೋಲುಗಳ ಸುರಿಮಳೆ ಭಾರತಕ್ಕೆ 16-0 ಗೆಲುವು

10:35 PM Nov 30, 2024 | Team Udayavani |

ಮಸ್ಕತ್‌: ಹಾಲಿ ಚಾಂಪಿಯನ್‌ ಭಾರತವು ಭರ್ಜರಿ ಆಟದ ಪ್ರದರ್ಶನ ನೀಡಿ ಚೈನೀಸ್‌ ತೈಪೆ ವಿರುದ್ಧ 16-0 ಗೋಲುಗಳ ಜಯ ಸಾಧಿಸಿ ಜೂನಿಯರ್‌ ಏಷ್ಯ ಕಪ್‌ ಹಾಕಿ ಕೂಟದಲ್ಲಿ ಸೆಮಿಫೈನಲ್‌ ಹಂತಕ್ಕೇರಿದೆ.

Advertisement

ದಿಲ್‌ರಾಜ್‌ ಸಿಂಗ್‌ ನಾಲ್ಕು ಗೋಲು  ದಾಖಲಿಸಿದರೆ ರೋಶನ್‌ ಕುಜುರ್‌ ಮತ್ತು ಸೌರಭ್‌ ಅನಂದ್‌ ಕುಶ್ವಹ ಅವರು ಹ್ಯಾಟ್ರಿಕ್‌ ಗೋಲು ಹೊಡೆದು ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು. ಸತತ ಮೂರನೇ ಗೆಲುವು ದಾಖಲಿಸಿದ ಪಿಆರ್‌ ಶ್ರೀಜೇಶ್‌ ಅವರಿಂದ ತರಬೇತಿ ಪಡೆದ ಭಾರತ ತಂಡವು “ಎ’ ಬಣದಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು ಇನ್ನೊಂದು ಸುತ್ತಿನ ಹೋರಾಟ ಬಾಕಿ ಉಳಿದಿರುವಂತೆ ಸೆಮಿಫೈನಲ್‌ ಹಂತಕ್ಕೇರಿದೆ. ಆರಂಕ ಹೊಂದಿರುವ ಜಪಾನ್‌ ದ್ವಿತೀಯ ಸ್ಥಾನದಲ್ಲಿದೆ.

ಭಾರತ ಡಿ. 1ರಂದು ನಡೆಯುವ ಕೊನೆಯ ಪಂದ್ಯದಲ್ಲಿ ಕೊರಿಯ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ಸ್‌ ಡಿ. 3ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next