ಪರ್ತ್: ಟಿ20 ವಿಶ್ವಕಪ್ ಗೆ ಅಭ್ಯಾಸ ನಡೆಸುತ್ತಿರುವ ಭಾರತ ತಂಡ ಇಂದು ಮತ್ತೊಂದು ಅಭ್ಯಾಸ ಪಂದ್ಯವಾಡಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 36 ರನ್ ಅಂತರದ ಸೋಲನುಭವಿಸಿದರು.
ಪರ್ತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಲಭ್ಯರಿದ್ದರೂ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಿದರು. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಚಾಹಲ್ ಗೆ ರೆಸ್ಟ್ ನೀಡಲಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಹಾಬ್ಸನ್ 64 ರನ್ ಮತ್ತು ಶಾರ್ಟ್ 52 ರನ್ ಗಳಿಸಿದರು. ಭಾರತದ ಪರ ಅಶ್ವಿನ್ ಮೂರು ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ ಎರಡು ವಿಕೆಟ್ ಉರುಳಿಸಿದರು.
ಇದನ್ನೂ ಓದಿ:ಉಗ್ರರ ವಿರುದ್ಧ ಕಾದಾಟ- ಗುಂಡೇಟು ತಗುಲಿ ಗಾಯಗೊಂಡಿದ್ದ ಸೇನಾ ಶ್ವಾನ ಝೂಮ್ ಇನ್ನಿಲ್ಲ
Related Articles
ಗುರಿ ಬೆನ್ನತ್ತಿದ ಭಾರತ ತಂಡದ ಪರ ನಾಯಕ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು. 55 ಎಸೆತಗಳನ್ನು ಎದುರಿಸಿದ ರಾಹುಲ್ 74 ರನ್ ಗಳಿಸಿದರು. ಆದರೆ ಸತತ ವಿಕೆಟ್ ಕಳೆದುಕೊಂಡ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಮಾತ್ರ ಗಳಿಸಿತು. ಈ ಮೂಲಕ ಎರಡನೇ ಅಭ್ಯಾಸ ಪಂದ್ಯದಲ್ಲಿ 36 ರನ್ ಅಂತರದ ಸೋಲು ಕಂಡಿತು.