Advertisement

ಬರಲಿದೆ ಗೇಮ್ ಚೇಂಜರ್…ಜುಲೈ ಅಂತ್ಯಕ್ಕೆ ಭಾರತದ ವಾಯುಪಡೆಗೆ 6 ರಾಫೆಲ್ ಸೇರ್ಪಡೆ

05:22 PM Jun 29, 2020 | Nagendra Trasi |

ನವದೆಹಲಿ:ಭಾರತ ಮತ್ತು ಫ್ರಾನ್ಸ್ ನಡುವಿನ 36 ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಹಿನ್ನೆಲೆಯಲ್ಲಿ ಜುಲೈ ಅಂತ್ಯದೊಳಗೆ ಆರು ರಾಫೆಲ್ ಯುದ್ಧ ವಿಮಾನ ಭಾರತ ಪಡೆಯಲಿದ್ದು, ಇದರೊಂದಿಗೆ ಭಾರತದ ವಾಯುಪಡೆ ಬಲ ಮತ್ತಷ್ಟು ಶಕ್ತಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಭಾರತ ಮತ್ತು ಫ್ರಾನ್ಸ್ ನಡುವೆ ರಾಫೆಲ್ ಯುದ್ಧ ವಿಮಾನ ಖರೀದಿಗಾಗಿ ಸುಮಾರು 7.8 ಬಿಲಿಯನ್ ಯುರೋ ಒಪ್ಪಂದ ನಡೆದಿತ್ತು. ಇದು ಡಸಾಲ್ಟ್ ರಾಫೆಲ್ ಮಲ್ಟಿರೋಲ್ ಡಸಾಲ್ಟ್ ಏವಿಯೇಷನ್ ನಿರ್ಮಿಸಿದ ಯುದ್ಧ ವಿಮಾನವಾಗಿದೆ.

“ಸದ್ಯದ ಪರಿಸ್ಥಿತಿ ಹಾಗೂ ಫ್ರಾನ್ಸ್ ನಲ್ಲಿ ಐಎಎಫ್ ಪೈಲಟ್ಸ್ ಗಳಿಗೆ ತರಬೇತಿ ನಡೆಯುತ್ತಿದ್ದು, ನಾವು ಜುಲೈ ತಿಂಗಳ ಅಂತ್ಯದಲ್ಲಿ ಆರು ರಾಫೆಲ್ ಯುದ್ಧ ವಿಮಾನ ಪಡೆಯಲಿದ್ದೇವೆ. ಭಾರತಕ್ಕೆ ಸಂಪೂರ್ಣ ಸಿದ್ಧತೆಯೊಂದಿಗೆ ಬರಲಿರುವ ರಾಫೆಲ್ ಅನ್ನು ನಾವು ಕೆಲವೇ ದಿನಗಳಲ್ಲಿ ಕಾರ್ಯಾಚರಣೆಗೆ ಬಳಸಬಹುದಾಗಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

ಲಡಾಖ್ ನ ಗಾಲ್ವಾನ್ ಕಣಿವೆಯ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಬಳಿ ಸಂಘರ್ಷ ನಡೆದ ನಂತರ ರಾಫೆಲ್ ಯುದ್ಧ ವಿಮಾನ ಭಾರತಕ್ಕೆ ಬರಲಿರುವ ಸುದ್ದಿ ಹೊರಬಿದ್ದಿದೆ ಎಂದು ವರದಿ ಹೇಳಿದೆ. ರಾಫೆಲ್ ಅತ್ಯಂತ ಉತ್ತಮ ಯುದ್ಧ ವಿಮಾನವಾಗಿದ್ದು, ಇದು ವಾಯಸೇನೆಗೆ ಸೇರ್ಪಡೆಗೊಂಡರೆ ಗೇಮ್ ಚೇಂಜರ್ ಆಗಿ ಪರಿಣಮಿಸಲಿದೆ ಎಂದು ಈಗಾಗಲೇ ಭಾರತೀಯ ಸೇನೆ ಅಭಿಪ್ರಾಯ ವ್ಯಕ್ತಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next