ಶ್ರೀನಗರ: ವಿಶ್ವದ ಅತಿ ಎತ್ತರದ ಪ್ರದೇಶವಾದ ಲಡಾಖ್‌ನಲ್ಲಿ ಪ್ರತಿಕೂಲ ಭೌಗೋಳಿಕ ಸವಾಲುಗಳ ನಡುವೆ ಎರಡು ಹಳ್ಳಿಗಳನ್ನು ಸಂಪರ್ಕಿಸುವ ಸಾರಿಗೆ ರಸ್ತೆಯೊಂದನ್ನು ನಿರ್ಮಿಸಿರುವ ರಕ್ಷಣಾ ಇಲಾಖೆ ಅಧೀನದ “ಗಡಿ ರಸ್ತೆ ನಿರ್ಮಾಣ ಸಂಸ್ಥೆ’ (ಬಿಆರ್‌ಒ) ವಿಶಿಷ್ಟ ಸಾಧನೆಯನ್ನು ಮಾಡಿದೆ.
ಲಡಾಖ್‌ನ ಚಿಸುಮ್ಲೆ ಹಾಗೂ ಡೆಮೊcàಕ್ ಎಂಬ ಎರಡು ಹಳ್ಳಿಗಳನ್ನು ಬೆಸೆಯುವ 86 ಕಿ.ಮೀ.ಗಳ ರಸ್ತೆ ಇದಾಗಿದ್ದು, 19,300 ಅಡಿಗಳಷ್ಟು ಎತ್ತರದಲ್ಲಿದೆ. “ಪ್ರಾಜೆಕ್ಟ್ ಹಿಮಾಂಕ್’ ಹೆಸರಿನ ಯೋಜನೆಯಡಿ ಆಗಿರುವ ಇದರ ನಿರ್ಮಾಣ ಕಠಿಣ ಮಾತ್ರವಲ್ಲ, ಈ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಹೆಜ್ಜೆ ಹೆಜ್ಜೆಗೂ ಅಪಾಯಕಾರಿ ಎಂದೆನಿಸಿತ್ತು. ಆದಾಗ್ಯೂ ಈ ರಸ್ತೆಯನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಅಂದಹಾಗೆ, ಈ ಎರಡೂ ಹಳ್ಳಿಗಳು ಭಾರತ- ಚೀನ ಗಡಿಯ ಕೂಗಳತೆ ದೂರದಲ್ಲಿರುವುದಷ್ಟೇ ಅಲ್ಲ, ಲೇಹ್‌ನಿಂದ 230 ಕಿ.ಮೀ ಅಂತರದಲ್ಲಿದ್ದು, ಅತಿ ಎತ್ತರದ ಪ್ರದೇಶವಾದ ಉಮ್ಲಿಂಗ್ಲಾ ಬೆಟ್ಟದ ತುದಿಯಿಂದ ಹಾದು ಹೋಗುತ್ತದೆ.
ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಬಿಪಿಒ ಸಿಬ್ಬಂದಿ ಹಾಗೂ ಪ್ರಾಜೆಕ್ಟ್ ಹಿಮಾಂಕ್ ಯೋಜನೆಯ ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮs…, “”ಅತಿ ಬೇಸಿಗೆಯ ದಿನಗಳಲ್ಲೂ ಲಡಾಖ್‌ನಲ್ಲಿನ ಉಷ್ಣಾಂಶ ಮೈನಸ್ 10ರಿಂದ 20 ಡಿಗ್ರಿಗೆ ಇರುತ್ತಿತ್ತು. ಇನ್ನು, ಚಳಿಗಾಲದಲ್ಲಿ ಮೈನಸ್ 40 ಡಿಗ್ರಿವರೆಗೆ ತಾಪಮಾನ ಕುಸಿಯುತ್ತಿತ್ತು. ಅಷ್ಟೇ ಅಲ್ಲ, ಆಮ್ಲ ಜನಕದ ಪ್ರಮಾಣ ಸಾಮಾನ್ಯ ವಾತಾವರಣದಲ್ಲಿರು ವುದಕ್ಕಿಂತ ಶೇ. 50ರಷ್ಟು ಕಡಿಮೆ ಇರುತ್ತಿತ್ತು. ಇಂಥ ಪ್ರತಿಕೂಲ ವಾತಾವರಣದಲ್ಲಿ ಕೆಲಸ ಮಾಡುವುದು ಭಾರೀ ಕಷ್ಟ. ಆದಾಗ್ಯೂ ಸಂಸ್ಥೆ ಅಲ್ಲಿ ರಸ್ತೆ ನಿರ್ಮಾಣ ಮಾಡಿದೆ” ಎಂದರು.
“”ಯಂತ್ರಗಳನ್ನು ಚಲಾಯಿಸುತ್ತಿದ್ದ ಸಿಬಂದಿಯು ಪ್ರತಿ 10 ನಿಮಿಷಗಳಿಗೊಮ್ಮೆ ಕೆಳಗಿಳಿದು ಬಂದು ದೀರ್ಘವಾಗಿ ಉಸಿರಾಡಿ, ಸೂಕ್ತ ಆಮ್ಲಜನಕ ಪಡೆದು ದೇಹ ಪ್ರಫುಲ್ಲಗೊಂಡ ನಂತರ ಮತ್ತೆ ಯಂತ್ರವನ್ನೇರುತ್ತಿದ್ದರು. ಇನ್ನು, ಯಂತ್ರಗಳಾದರೋ ಬಂಡೆಗಲ್ಲುಗಳ ಮೇಲೆ, ಒರಟು ಮೇಲ್ಮೆಗಳ ಮೇಲೆ ರಸ್ತೆ ಅಕ್ಕಪಕ್ಕದ ಬಂಡೆ ಗಲ್ಲುಗಳಿಗೆ ತಾಕುತ್ತಿದ್ದರಿಂದ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿದ್ದವು. ಅವನ್ನು ಸರಿಪಡಿಸಿಕೊಂಡು ಆನಂತರ ಸಿಬಂದಿಯ ಯೋಗ ಕ್ಷೇಮವನ್ನೂ, ಉತ್ಸಾಹವನ್ನು ಕಾಪಾಡಿಕೊಂಡು ಕೆಲಸ ಮಾಡುವುದು ನಿಜಕ್ಕೂ ಸವಾಲೆನಿಸಿತ್ತು” ಎಂದು ಪೂರ್ವಿಮs… ಬಣ್ಣಿಸಿದರು.