Advertisement

ಚೀನ ಬಾಹ್ಯಾಕಾಶ ಮಾರುಕಟ್ಟೆ ಕಸಿದುಕೊಳ್ಳುತ್ತಿದೆ ಭಾರತ!

10:08 PM Apr 06, 2023 | Team Udayavani |

ನವದೆಹಲಿ: ಚೀನ ಮತ್ತು ರಷ್ಯಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುತ್ತಿರುವ ಸನ್ನಿವೇಶದ ಲಾಭ ಪಡೆಯಲು ಮುಂದಾಗಿರುವ ಭಾರತ, ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಸ್ಪೇಸ್‌ಎಕ್ಸ್‌ಗೆ ಪರ್ಯಾಯವಾಗಿ ಬೆಳೆಯಲು ಆರಂಭಿಸಿದೆ. ಸರ್ಕಾರಿ ಸ್ವಾಮ್ಯದ ನ್ಯೂಸ್ಪೇಸ್‌ ಇಂಡಿಯಾ ಲಿ. ಕಳೆದ ತಿಂಗಳಷ್ಟೇ ಬ್ರಿಟನ್‌ ಮೂಲದ ಒನ್‌ ವೆಬ್‌ ಕಂಪನಿಗಾಗಿ ಮೂರು ಡಜನ್‌ ಸಂವಹನ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

Advertisement

2025ರ ವೇಳೆಗೆ ಭಾರತದ ಬಾಹ್ಯಾಕಾಶದ ಆರ್ಥಿಕತೆಯು 600 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. 2020ರಲ್ಲಿ ಇದು 447 ಶತಕೋಟಿ ಡಾಲರ್‌ ಆಗಿತ್ತು. ಈ ವಲಯದಲ್ಲಿ ಪ್ರಸ್ತುತ ಭಾರತವು ಚೀನಾಗಿಂತ ಬಹಳಷ್ಟು ಹಿಂದಿದೆ. 2020ರ ಮಾರ್ಚ್‌ ವೇಳೆಗೆ ಭೂಮಿಯ ಕಕ್ಷೆಯಲ್ಲಿರುವ ಒಟ್ಟಾರೆ ಉಪಗ್ರಹಗಳ ಪೈಕಿ ಚೀನಾದ ಪಾಲು ಶೇ.13.6ರಷ್ಟಿದ್ದರೆ, ಭಾರತದ ಪಾಲು ಕೇವಲ ಶೇ.2.3ರಷ್ಟು ಮಾತ್ರ. ಹೀಗಿದ್ದರೂ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದ್ದು, ಮುಂದೊಂದು ದಿನ ರಷ್ಯಾ, ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ನಿಚ್ಚಳವಾಗಿದೆ.

ಉದ್ಯಮಿ ಎಲಾನ್‌ ಮಸ್ಕ್ ಅವರ ಸ್ಪೇಸ್‌ಎಕ್ಸ್‌ ಜೊತೆಗೆ, ರಷ್ಯಾ ಮತ್ತು ಚೀನಾ ಕೂಡ ಉಪಗ್ರಹಗಳ ವಾಣಿಜ್ಯಿಕ ಉಡಾವಣೆಯಲ್ಲಿ ಪ್ರಾಬಲ್ಯ ಹೊಂದಿವೆ. ಆದರೆ, ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದು ಹಾಗೂ ಅಮೆರಿಕದೊಂದಿಗೆ ಚೀನಾ ಹೊಂದಿರುವ ವೈಮನಸ್ಸು ಈ ಎರಡೂ ರಾಷ್ಟ್ರಗಳ ಬಾಹ್ಯಾಕಾಶ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಮೊದಲು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಒನ್‌ವೆಬ್‌ ಕೂಡ ಈಗ ಭಾರತದ ಇಸ್ರೋ ಜತೆ ಸಹಭಾಗಿತ್ವ ಹೊಂದಿ, ಉಪಗ್ರಹಗಳ ಉಡಾವಣೆ ಮಾಡಿಸಿಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next