Advertisement

ಧರ್ಮ-ಸಂಸ್ಕೃತಿಗೆ ಭಾರತ ಹೆಸರುವಾಸಿ

07:21 PM Jul 13, 2021 | Girisha |

ಚಡಚಣ: ವಿಶ್ವದಲ್ಲಿಯೇ ಭಾರತದಲ್ಲಿ ಮಾತ್ರ ಅಧ್ಯಾತ್ಮ, ಧರ್ಮ, ಸಂಸ್ಕೃತಿ ಮತ್ತು ಮಠಗಳಿಗೆ ಹೆಸರಾಗಿದೆ. ಅದರಲ್ಲೂ ಸಾಧು ಸಂತರಿಗೆ ವಿಶೇಷ ಸ್ಥಾನವಿದ್ದು, ಗೌರವದಿಂದ ಕಾಣುವ ಸ್ವಭಾವ ನಮ್ಮ ದೇಶದಲ್ಲಿದೆ ಎಂದು ಆಲಮೇಲ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಹೇಳಿದರು.

Advertisement

ಇಂಚಗೇರಿ ಗ್ರಾಮದ ತಪೋರತ್ನ ಕರಿಬಸವೇಶ್ವರ 33ನೇ ಹಾಗೂ ಲಿಂಗೈಕ್ಯ ಡಾ| ರೇಣುಕ ಶಿವಾಚಾರ್ಯರ ಪ್ರಥಮ ಪುಣ್ಯಾರಾಧನೆ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ಅವರು ನೀಡಿದರು. ಮನುಷ್ಯನಿಗೆ ಶಾಶ್ವತ ಶಾಂತಿ ಸುಖ ನೆಮ್ಮದಿ ದೊರಕಲು ಅಧ್ಯಾತ್ಮ ಪ್ರವಚನ, ಗುರುಗಳ ಮಾರ್ಗದರ್ಶನ ಬೇಕು. ಅಂದಾಗ ಅವು ಸಂಸಾರ ಜಂಜಾಟದಿಂದ ಮುಕ್ತನಾಗಲು ಸಾಧ್ಯವಾಗುವುದು.

ಈ ಮಠವು ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಧರ್ಮಕ್ಕೆ ತಳಹದಿಯಾಗಿದೆ. ಈಗಿನ ಮರಿದೇವರಲ್ಲಿ ಮೊದಲಿನ ಗುರುಗಳನ್ನು ಕಾಣುವ ಭಾವನೆ ಎಲ್ಲ ಭಕ್ತರಲ್ಲಿ ಮೂಡಿ ಬಂದರೆ ಇದು ಇನ್ನಷ್ಟು ಉನ್ನತಿ ಹೊಂದುವುದು ಎಂದರು. ನಾಗಠಾಣ ಉದಯೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಲಿಂ.ಡಾ| ರೇಣುಕ ಶಿವಾಚಾರ್ಯರು ಮಠದ ಅಭಿವೃದ್ಧಿಗೆ ಶ್ರಮಿಸಿದವರು. ಅವರ ಮಾರ್ಗದರ್ಶನದಲ್ಲಿ ಈಗಿನ ಮರಿ ದೇವರು ಸಾಗುತ್ತಿದ್ದಾರೆ. ಅವರಿಗೆ ಭಕ್ತ ಮಂಡಳಿಯ ಸಹಕಾರ ಅವಶ್ಯಕ ಎಂದರು. ಅಧ್ಯಕ್ಷತೆ ವಹಿಸಿದ್ದ ಇಂಚಗೇರಿ ತಪೋರತ್ನ ಕರಿಬಸವೇಶ್ವರ ಹಿರೇಮಠದ ರುದ್ರಮುನಿ ದೇವರು ಮಾತನಾಡಿ, ಮಠದ ಶ್ರೇಯೋಭಿವೃದ್ಧಿಗೆ ಭಕ್ತರೇ ಮೂಲಕಾರಣರು.

ತಾವು ಸಲಹೆ ಸೂಚನೆಗಳಿಟ್ಟರೆ ಸ್ವಾಗತ ಎಂದರು. ದೇವರಹಿಪ್ಪರಗಿಯ ಗಂಗಾಧರ ಶಿವಾಚಾರ್ಯರು, ಆಲಮೇಲದ ಗುರುಲಿಂಗ ಶಿವಾಚಾರ್ಯರು, ನಾಗಠಾಣದ ಚನ್ನಮಲ್ಲಿಕಾರ್ಜುನ ಶ್ರೀಗಳು, ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಮುಳವಾಡದ ಸಿದ್ಧಲಿಂಗ ವಿರುಪಾಕ್ಷ ಸ್ವಾಮಿಗಳು, ತಿಕೋಟಾ ವಿರಕ್ತಮಠದ ಶಿವಬಸವ ಶಿವಾಚಾರ್ಯರು ಧರ್ಮಸಭೆ ಸಾನ್ನಿಧ್ಯ ವಹಿಸಿದ್ದರು. ಮಲ್ಲಪ್ಪ ಸಕ್ರಿ, ಶಂಕರ ದೇವರ, ಮಹಾದೇವ ನಾವಿ, ಮಂಜುನಾಥ ಪರ್ವತಿ, ಭಗವಂತ ಬಡಿಗೇರ, ಅಂಬರೀಷ ಬೆಳ್ಳೆನವರ, ಕಲ್ಲಪ್ಪ ಅರವತ್ತಿ, ಈಸು ಬಡಿಗೇರ, ಸಂಗಮೇಶ ಬಡಿಗೇರ, ಕಾಳಪ್ಪ ಬಡಿಗೇರ, ಬಾಬು ಚವ್ಹಾಣ, ರವಿದಾಸ ಜಾಧವ, ನೀಲಪ್ಪಗೌಡ ಬಿರಾದಾರ, ರಾಜು ಏಳಗಿ, ಸಿದ್ದು ಏಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next