Advertisement

ಬೆಳಗಿನ ಆಜಾನ್‌ ವಿರೋಧಿಸಿ ನಟಿ ಸುಚಿತ್ರಾ ಟ್ವೀಟ್‌

06:35 AM Jul 25, 2017 | Team Udayavani |

ಮುಂಬಯಿ: ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್‌ ಮೊಳಗಿಸುವುದನ್ನು ಗಾಯಕ ಸೋನು ನಿಗಮ್‌ ಈ ಹಿಂದೆ ಟ್ವೀಟ್‌ ಮಾಡಿ ವಿವಾದ ಸೃಷ್ಟಿಸಿದ್ದರು. ಈಗ ಬೆಳಗಿನ ಜಾವ ಆಜಾನ್‌ ಮೊಳಗುವುದನ್ನು ವಿರೋಧಿಸಿ ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಟ್ವೀಟ್‌ ಮಾಡಿದ್ದಾರೆ. ‘4:45ಕ್ಕೆ ಮನೆಗೆ ಬಂದೆ. ಬೆಚ್ಚಿಬೀಳಿಸುವ, ಕಿವಿ ತೂತಾಗುವಂಥ ಆಜಾನ್‌ ಕರೆ ಕಿವಿಗಪ್ಪಳಿಸಿತು’ ಎಂದು ಬರೆದಿದ್ದಾರೆ. ಮತ್ತೆ ಮರುಟ್ವೀಟ್‌ ಮಾಡಿರುವ ಅವರು ‘ದೇವರನ್ನು ಒಲಿಸಿಕೊಳ್ಳಲು ಧ್ವನಿವರ್ಧಕದ ಅಗತ್ಯವಿಲ್ಲ. ಬೆಳಗ್ಗೆ 5ಕ್ಕೆ ನೆರೆಹೊರೆಯ ಜನರನ್ನು ಎದ್ದೇಳಿಸುವುದು ನಾಗರಿಕ ವರ್ತನೆ ಅಲ್ಲ ‘ ಎಂದು ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next