Advertisement

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

03:09 AM Nov 16, 2024 | Team Udayavani |

ಕುಂಬಳೆ: ಉದ್ಯೋಗ ಭರವಸೆ ನೀಡಿ ಹಲವರಿಗೆ ವಂಚಿಸಿದ ಆರೋಪ ಎದುರಿಸಿ ಪ್ರಸ್ತುತ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಸಚಿತಾ ರೈ ವಿರುದ್ಧ ಮತ್ತೂಂದು ವಂಚನೆ ಕೇಸು ದಾಖಲಾಗಿದೆ. ಮಗಳಿಗೆ ಉದ್ಯೋಗ ಕೊಡಿಸುವಂತೆ ಸಚಿತಾ ರೈಗೆ 12 ಲಕ್ಷ ರೂ. ನೀಡಿ ಮೋಸ ಹೋಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸ್‌ ದೂರು ದಾಖಲಾಗಿದೆ.

Advertisement

ಬದಿಯಡ್ಕ ಪಳ್ಳತ್ತಡ್ಕ ನೆಲ್ಲಿಕ್ಕಳ ನಿವಾಸಿ ಅರವಿಂದಾಕ್ಷನ್‌ ಅವರ ಪತ್ನಿ ಸರೋಜಿನಿ (50) ಅವರಿಂದ ಪುತ್ರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ
ಸಚಿತಾ ರೈ 12.70 ಲಕ್ಷ ರೂ. ಪಡೆದಿದ್ದಳು.

ಸರೋಜಿನಿ ತನ್ನ ಚಿನ್ನಾಭರಣವನ್ನು ಅಡವಿರಿಸಿ ಹಣ ನೀಡಿದ್ದು, ಬಳಿಕ ಸಚಿತಾಳ ಮೋಸ ಅರಿವಾಯಿತು. ಇದೇ ಕೊರಗಿನಲ್ಲಿ ಸರೋಜಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತಿ ಅರವಿಂದಾಕ್ಷನ್‌ ಪೊಲೀಸ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next