Advertisement

ಪ್ರಪಂಚಕ್ಕೆ ಆಧ್ಯಾತ್ಮಿಕ ಬೆಳಕು ನೀಡಿದ‌ ದೇಶ ಭಾರತ: ಒಡಿಯೂರು ಶ್ರೀ

03:45 AM Jul 10, 2017 | Team Udayavani |

ವಿಟ್ಲ : ಗುರು ಎಂಬುದು ತತ್ವವಾಗಿದೆ. ಬದುಕಿನಲ್ಲಿ ಕಷ್ಟವನ್ನು ದೂರ ಮಾಡಲು ತತ್ವ ಮುಖ್ಯ ಕಾರಣ. ಇದು ನಮ್ಮನ್ನು ಬೆಳಗುತ್ತದೆ. ಭಾರತ ದೇಶ ಇಡೀ ಪ್ರಪಂಚಕ್ಕೆ ಆಧ್ಯಾತ್ಮದ ಬೆಳಕು ನೀಡುತ್ತದೆ. ಜಗತ್ತಿನ ಗುರು ಭಾರತವಾಗಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಭಾನುವಾರ ಒಡಿಯೂರು ಗುರುದೇವದತ್ತ ಸಂಸ್ಥಾನದ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ವತಿಯಿಂದ ಒಡಿಯೂರು ಗ್ರಾಮೋತ್ಸವ-ಶ್ರೀಗಳ ಜನ್ಮದಿನೋತ್ಸವ ಪ್ರಯುಕ್ತ ಸಂಸ್ಥಾನದ ಕೃಷಿಭೂಷಿಯಲ್ಲಿ ನಡೆದ ಕೆಸರುಗದ್ದೆ ಆಟೋಟಗಳು (ಕೆಸರೊxಂಜಿ ದಿನ) ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಮಾಜದಲ್ಲಿ ಆಶಾಂತಿ ಕಂಡು ಬರುತ್ತಿದೆ. ಇದು ಮನಸ್ಸಿಗೆ ಬೇಸರ ತರುತ್ತಿದೆ. ದ್ವೇಷದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಭಾವನಾತ್ಮಕ ಸಂಬಂಧಗಳ ವಿಚಾರಗಳನ್ನು ಎಲ್ಲ ಮತಧರ್ಮಗಳು ತಿಳಿಸಿಕೊಟ್ಟಿದೆ. ಅವುಗಳನ್ನು ತಿಳಿಸುವ ಕೊರತೆಯಿಂದಾಗಿ ಅಶಾಂತಿ, ಧರ್ಮದಲ್ಲಿ ರಾಜಕೀಯ ತಂದಾಗ ಗೊಂದಲ ಉಂಟಾಗುತ್ತಿದೆ. ರಾಜಕೀಯರಹಿತವಾಗಿ ಧರ್ಮದ ಪುನರ್‌ತ್ಥಾನ ಆಗಬೇಕು ಎಂದರು.

ಸಾಧ್ವಿà  ಶ್ರೀ  ಮಾತಾನಂದಮಯೀ, ಗ್ರಾಮೋತ್ಸವ ಸಮಿತಿ ಕೋಶಾಧಿಕಾರಿ ಜಯಂತ್‌ ಜೆ. ಕೋಟ್ಯಾನ್‌, ಒಡಿಯೂರು ಸೇವಾಬಳಗದ ಅಧ್ಯಕ್ಷ ಎ. ಅಶೋಕ್‌ ಕುಮಾರ್‌ ಬಿಜೈ, ಒಡಿಯೂರು  ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರಾದ ಬಿ.ಕೆ.  ಚಂದ್ರಶೇಖರ್‌, ಲಿಂಗಪ್ಪ ಗೌಡ ಪನೆಯಡ್ಕ, ಉಗ್ಗಪ್ಪ ಶೆಟ್ಟಿ ಕೊಂಬಿಲ, ವೇಣುಗೋಪಾಲ ಮಾರ್ಲ, ಒಡಿಯೂರು ಶ್ರೀ  ಗ್ರಾಮವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ಮುಂಬಯಿ ಸೇವಾ ಬಳಗದ ಪ್ರಕಾಶ್‌ ಮುಂಬಯಿ, ಒಡಿಯೂರು  ಶ್ರೀ  ವಜ್ರಮಾತಾ ಮಹಿಳಾ ವಿಕಾಸಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ವಿದ್ಯಾಪೀಠದ ಮುಖ್ಯೋಪಾಧ್ಯಾಯ ಜಯಪ್ರಕಾಶ್‌, ಶ್ರೀಧರ್‌ ಶೆಟ್ಟಿ ಗುಬÂ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್‌ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಎಚ್‌.ಕೆ.ಪುರುಷೋತ್ತಮ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು. ಮಾಂತೇಶ್‌ ಭಂಡಾರಿ ವಂದಿಸಿದರು. ಸದಾಶಿವ ಅಳಿಕೆ ಹಾಗೂ ಶರತ್‌ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next