Advertisement

ಜಡ್ಜ್ ವಿರುದ್ಧ ವಾಗ್ಧಂಡನೆಗೆ ಇಂಡಿಯಾ ಒಕ್ಕೂಟ ಸಿದ್ಧತೆ

09:03 AM Dec 12, 2024 | Team Udayavani |

ನವದೆಹಲಿ: ವಿಶ್ವ ಹಿಂದೂ ಪರಿಷತ್‌ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ದೇಶದಲ್ಲಿ ಕಾನೂನು ನಡೆಯುವುದೇ ಬಹುಸಂಖ್ಯಾತರ ಆಧಾರದಲ್ಲಿ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ವಿರುದ್ಧ ವಾಗ್ಧಂಡನೆಗೆ ನೋಟಿಸ್‌ ನೀಡಲು ಇಂಡಿಯಾ ಒಕ್ಕೂಟ ಪಕ್ಷಗಳು ಮುಂದಾಗಿವೆ.

Advertisement

4 ಪತ್ನಿಯರು, ಹಲಾಲ್‌, ತ್ರಿವಳಿ ತಲಾಖ್‌ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಯಾದವ್‌ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಇಂಡಿಯಾ ಕೂಟದ 36 ಕ್ಕೂ ಹೆಚ್ಚು ಸಂಸದರು ಗೊತ್ತುವಳಿ ಮಂಡಿಸಲು ಅಗತ್ಯವಿರುವ ನೋಟಿಸ್‌ಗೆ ಅಂಕಿತ ಹಾಕಿದ್ದಾರೆ. ಗುರುವಾರ ಇನ್ನಷ್ಟು ಸಂಸದರು ನೋಟಿಸ್‌ಗೆ ಸಹಿ ಹಾಕಿದ ಬಳಿಕ ರಾಜ್ಯಸಭೆಯಲ್ಲಿ ನೋಟಿಸ್‌ ಸಲ್ಲಿಸುವುದಾಗಿ ವಿಪಕ್ಷಗಳ ಸಂಸದರು ಹೇಳಿದ್ದಾರೆ.

ಈಗಾಗಲೇ ನೋಟಿಸ್‌ಗೆ ಸಹಿ ಹಾಕಿರುವವರ ಪೈಕಿ ಕಾಂಗ್ರೆಸ್‌ ನಾಯಕರಾದ ದಿಗ್ವಿಜಯ್‌ ಸಿಂಗ್‌, ಜೈರಾಂ ರಮೇಶ್‌, ಆಪ್‌ನ ಸಂಜಯ್‌ ಸಿಂಗ್‌, ಟಿಎಂಸಿ ಸಾಕೇತ್‌ ಗೋಖಲೆ ಅವರೂ ಸೇರಿದ್ದಾರೆ. ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸುವುದಕ್ಕೂ ಮುನ್ನ ನೋಟಿಸ್‌ ಸಲ್ಲಿಸಬೇಕಿದ್ದು ಅದಕ್ಕೆ ಕನಿಷ್ಠ 50 ಸದಸ್ಯರಾದರೂ ಸಹಿ ಹಾಕಲೇಬೇಕೆಂಬ ನಿಯಮವಿದೆ. ರಾಜ್ಯಸಭೆಯಲ್ಲಿ ರಾಜ್ಯಸಭೆಯಲ್ಲಿ ಇಂಡಿಯಾ ಕೂಟದ 85 ಸಂಸದರಿರುವ ಕಾರಣ ಗುರುವಾರ ನೋಟಿಸ್‌ ಸಲ್ಲಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ನಂತರ ಏನಾಗಲಿದೆ?
ನೋಟಿಸ್‌ಗೆ ಪ್ರಿಸೈಡಿಂಗ್‌ ಆಫೀಸರ್‌ ಅಂಗೀಕಾರ ನೀಡಬಹುದು ಅಥವಾ ನೀಡದೆಯೂ ಇರಬಹುದು. ಒಪ್ಪಿಗೆ ದೊರತರೆ ಸುಪ್ರೀಂಕೋರ್ಟ್‌ನ ಒಬ್ಬ ನ್ಯಾಯಮೂರ್ತಿ ಸೇರಿದಂತೆ ಮೂರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ, ನ್ಯಾ.ಯಾದವ್‌ ವಿರುದ್ಧ ಪ್ರಕರಣ ಯೋಗ್ಯ ವಾಗಿದೆಯೇ ಎಂದು ಪರಿಶೀಲಿಸುತ್ತದೆ.

ಹಿಂದೆಯೂ ಗೊತ್ತುವಳಿ ಮಂಡಿಸಲಾಗಿತ್ತೇ?
ಈ ಹಿಂದೆಯೂ 4 ಬಾರಿ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಹಾಗೂ 2 ಬಾರಿ ಸುಪ್ರೀಂಕೋರ್‌r ನ್ಯಾಯಮೂರ್ತಿಗಳನ್ನು ಪದ ಚ್ಯುತಿಗೊಳಿಸಲು ಪ್ರಯತ್ನಿಸಲಾಗಿದೆ ಆದರೆ, ಈ ಯಾವ ಪ್ರಕ್ರಿಯೆಗಳು ಸಫ‌ಲವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next