Advertisement
ಗೆಲ್ಲಬಹುದಾಗಿದ್ದ ಮೊದಲ ಪಂದ್ಯಕ್ಕೆ ಟೈ ಮುದ್ರೆ ಒತ್ತಿದ ಟೀಮ್ ಇಂಡಿಯಾ, ದ್ವಿತೀಯ ಮುಖಾಮುಖೀಯಲ್ಲಿ ಉತ್ತಮ ಆರಂಭದ ಹೊರತಾಗಿಯೂ ಕುಸಿತಕ್ಕೆ ಸಿಲುಕಿತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಸ್ಪಿನ್ನಿಗೆ ಅಂಜದೆ ಮುನ್ನುಗ್ಗಿ ಆಡಬೇಕಾಗಿದೆ. ಇಲ್ಲವಾದರೆ ಶ್ರೀಲಂಕಾ ವಿರುದ್ಧ 27 ವರ್ಷಗಳ ಬಳಿಕ ಭಾರತ ಮೊದಲ ಸಲ ಏಕದಿನ ಸರಣಿಯನ್ನು ಕಳೆದುಕೊಳ್ಳಲಿದೆ!
Related Articles
Advertisement
ಲಂಕಾ ಸ್ಪಿನ್ನರ್ಗಳ ಯಶಸ್ಸು
ಬುಧವಾರವೂ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನಿಗೆ ಹೊರತಾಗಿ ಬೇರೆ ಎಸೆತಗಳಿಗೆ ನೆರವು ನೀಡುವ ಸಾಧ್ಯತೆ ಇಲ್ಲ. ಮೊದಲೆರಡು ಪಂದ್ಯಗಳಲ್ಲಿ ಲಂಕಾ ಸ್ಪಿನ್ನರ್ ಇದರ ಭರಪೂರ ಪ್ರಯೋಜನ ಪಡೆದಿದ್ದರು. ಎರಡೂ ಸಲ ಟಾಸ್ ಗೆದ್ದ ಶ್ರೀಲಂಕಾ, ಸವಾಲಿನ ಮೊತ್ತ ದಾಖಲಿಸಿ ಭಾರತವನ್ನು ಸ್ಪಿನ್ ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿತ್ತು. ಬುಧವಾರವೂ ಆಷ್ಟೇ, ಚೇಸಿಂಗ್ ತಂಡಕ್ಕೆ ಸಮಸ್ಯೆ ತಪ್ಪಿದ್ದಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಹಿಂದಿನ ಪಂದ್ಯದ ವೇಳೆ ಗಾಯಕ್ಕೀಡಾಗಿ ವನಿಂದು ಹಸರಂಗ ಸರಣಿಯಿಂದಲೇ ಹೊರಬಿದ್ದರು. ಇವರ ಬದಲು ಬಂದ ಜೆಫ್ರಿ ವಾಂಡರ್ಸೆ, ಇನ್ನಷ್ಟು ಅಪಾಯಕಾರಿಯಾಗಿ ಗೋಚರಿಸಿದರು. ಇವರ ಬುಟ್ಟಿಗೆ 6 ವಿಕೆಟ್ ಬಿದ್ದಿತ್ತು.
ಸಂಭಾವ್ಯ ತಂಡಗಳು
ಭಾರತ: ರೋಹಿತ್, ಗಿಲ್, ಕೊಹ್ಲಿ, ಶ್ರೇಯಸ್, ರಾಹುಲ್, ಪರಾಗ್, ಅಕ್ಷರ್, ವಾಷಿಂಗ್ಟನ್, ಕುಲದೀಪ್, ಅರ್ಶದೀಪ್, ಸಿರಾಜ್.
ಶ್ರೀಲಂಕಾ: ನಿಸ್ಸಂಕ, ಅವಿಷ್ಕಾ, ಕುಸಾಲ್, ಸಮರವಿಕ್ರಮ, ಅಸಲಂಕ (ನಾಯಕ), ಜನಿತ್, ಕಮಿಂಡು, ವೆಲ್ಲಲಗೆ, ವಾಂಡರ್ಸೆ, ಅಕಿಲ, ಅಸಿತ.