Advertisement

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

11:58 PM Dec 23, 2024 | Team Udayavani |

ಜೋಹಾನ್ಸ್‌ಬರ್ಗ್‌: ಪ್ರವಾಸಿ ಪಾಕಿಸ್ಥಾನ ತಂಡವು ದಕ್ಷಿಣ ಆಫ್ರಿಕಾ ತಂಡದೆದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮೂಲಕ ಗೆದ್ದುಕೊಂಡಿದೆ.

Advertisement

ರವಿವಾರ ನಡೆದ ಮೂರನೇ ಪಂದ್ಯವನ್ನು ಪಾಕಿಸ್ಥಾನ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 36 ರನ್ನುಗಳಿಂದ ಜಯಿಸುವ ಮೂಲಕ ಈ ಸಾಧನೆ ಮಾಡಿದೆ.

ಮಳೆಯಿಂದ ತೊಂದರೆಗೊಳಗಾಗಿ 47 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಸೈಮ್‌ ಆಯುಬ್‌ ಅವರ ಶತಕದ ನೆರವಿನಿಂದ 9 ವಿಕೆಟಿಗೆ 308 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಪಟ್ಟ ದಕ್ಷಿಣ ಆಫ್ರಿಕಾ ಅಂತಿಮವಾಗಿ 42 ಓವರ್‌ಗಳಲ್ಲಿ 271 ರನ್ನಿಗೆ ಆಲೌಟಾಗಿ ಶರಣಾಯಿತು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next