ಚೆನ್ನೈ ಟೆಸ್ಟ್‌ನ ಮೊದಲ ದಿನ ಬಾಂಗ್ಲಾ ಬೌಲರ್‌ಗಳ ದಾಳಿಗೆ ಸಿಲುಕಿ ತತ್ತರಿಸಿದ್ದ ಭಾರತೀಯ ತಂಡವನ್ನು ಅಶ್ವಿನ್, ಜಡೇಜ ಮತ್ತು ಪಂತ್ ಮೇಲಕ್ಕೆತ್ತಿದ್ದರು. ಅಶ್ವಿನ್ ಅವರ ಆಲ್‌ರೌಂಡ್ ಪ್ರದರ್ಶನ, ರವೀಂದ್ರ ಜಡೇಜ ಅವರ ಉತ್ತಮ ಗುಣಮಟ್ಟದ ಆಟ ಮತ್ತು ಸುದೀರ್ಘ ಸಮಯದ ಬಳಿಕ ಟೆಸ್rಗೆ ಮರಳಿದ ರಿಷಭ್ ಪಂತ್ ಅವರ ಮನಮೋಹಕ ಬ್ಯಾಟಿಂಗ್ ಬಲದಿಂದ ಭಾರತ ಚೆನ್ನೈಯಲ್ಲಿ ಭರ್ಜರಿ ಜಯ ಸಾಧಿಸುವಂತಾಯಿತು.
Advertisement
ಮೊದಲ ದಿನ ನಾಟಕೀಯ ಕುಸಿತಕ್ಕೆ ಒಳಗಾದರೂ ಅದ್ಭುತ ಹೋರಾಟದ ಮೂಲಕ ತಿರುಗಿ ಬಿದ್ದ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅದರಲ್ಲಿಯೂ ತವರಿನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೆ ದೃಢಪಡಿಸಿತು. ಇದೀಗ ತವರಿನಲ್ಲಿ ದಾಖಲೆ 18ನೇ ಟೆಸ್ಟ್ ಸರಣಿ ಗೆಲುವಿನತ್ತ ಹೊರಟಿದೆ.
ಚೆನ್ನೈ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಂದ ಈ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನಿರೀಕ್ಷಿಸ ಲಾಗಿದೆ. ಮುಂದಿನ ದಿನಗಳಲ್ಲಿ ಬಹಳಷ್ಟು ಟೆಸ್ಟ್ ಪಂದ್ಯಗಳು ನಡೆಯುವ ಕಾರಣ ಅವರಿಬ್ಬರು ಬ್ಯಾಟಿಂಗ್‌ನಲ್ಲಿ ಮಿಂಚವುದು ಅಗತ್ಯವಾಗಿದೆ. ಇವರಿಬ್ಬರ ಜತೆ ದೀರ್ಘ ಸಮಯದ ಬಳಿಕ ಟೆಸ್ಟ್‌ಗೆ ಮರಳಿದ ರಿಷಭ್ ಪಂತ್ ಚೆನ್ನೈಯಲ್ಲಿ ಅಮೋಘ ಬ್ಯಾಟಿಂಗ್ ನಿರ್ವಹಣೆ ನೀಡಿ ತನ್ನ ಪುನರಾಗಮನವನ್ನು ಯಶಸ್ವಿಯಾಗಿ ಸಾರಿದ್ದಾರೆ.
Related Articles
Advertisement
18ನೇ ಟೆಸ್ಟ್ ಸರಣಿ ಗೆಲುವಿಗೆ ಪ್ರಯತ್ನಭಾರತೀಯ ತಂಡ 2012-13ರ ಬಳಿಕ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಒಮ್ಮೆಯೂ ಸೋಲನ್ನು ಕಂಡಿಲ್ಲ. 2012- 13ರಲ್ಲಿ ಧೋನಿ ನೇತೃತ್ವದ ಭಾರತೀಯ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಆಬಳಿಕ ತವರಿನಲ್ಲಿ ನಡೆದ
ಕಳೆದ ಫೆಬ್ರವರಿಯಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯ ಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸುವ ಮೂಲಕ ಮುನ್ನಡೆ ಸಾಧಿಸಿದ ಭಾರತ ತನ್ನ ಸತತ ಟೆಸ್ಟ್ ಸರಣಿ ಗೆಲುವನ್ನು ದಾಖಲೆ 17ಕ್ಕೇರಿಸಿಕೊಂಡಿತ್ತು. ಇದೀಗ ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಅದನ್ನು 18ಕ್ಕೇರಿಸುವ ವಿಶ್ವಾಸದಲ್ಲಿದೆ. ಪಿಚ್ ಸ್ಪಿನ್‌ಗೆ ನೆರವು
ಗ್ರೀನ್ ಪಾರ್ಕ್ ಪಿಚ್ ನಿಧಾನ ಗತಿಯ ಟ್ರ್ಯಾಕ್ ಆಗಿದ್ದು ಸ್ಪಿನ್ನರ್‌ಗಳಿಗೆ ನೆರವು ನೀಡ ಲಿದೆ. ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ನೆರವು ನೀಡಿದರೂ ಪಂದ್ಯ ಸಾಗುತ್ತಿದ್ದಂತೆ ಪಿಚ್ ನಿಧಾನಗತಿಗೆ ತಿರುಗಲಿದೆ. 300 ವಿಕೆಟ್ ನಿರೀಕ್ಷೆಯಲ್ಲಿ ಜಡೇಜ
ರವೀಂದ್ರ ಜಡೇಜ ಟೆಸ್ಟ್‌ನಲ್ಲಿ 300 ವಿಕೆಟ್ ಪಡೆಯುವ ಸನಿಹದಲ್ಲಿದ್ದಾರೆ. ಇಷ್ಟರವರೆಗೆ ಆಡಿದ 73 ಟೆಸ್ಟ್‌ಗಳಲ್ಲಿ ಅವರು 299 ವಿಕೆಟ್ ಮತ್ತು 3122 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 300 ವಿಕೆಟ್ ಮತ್ತು 3 ಸಾವಿರ ರನ್ ಅನ್ನು ಅತೀ ವೇಗವಾಗಿ ಪೂರ್ತಿಗೊಳಿಸಿದ 2ನೇ ಆಟಗಾರ ಎಂದೆನಿಸಿಕೊಳ್ಳಲು ಜಡೇಜ ಅವರಿಗೆ ಇನ್ನೊಂದು ವಿಕೆಟ್ ಬೇಕಾಗಿದೆ. ಭಾರತ-ಬಾಂಗ್ಲಾ
ಟೆಸ್ಟ್ ಮುಖಾಮುಖಿ
ಒಟ್ಟು ಪಂದ್ಯ 14
ಭಾರತ ಜಯ 12
ಬಾಂಗ್ಲಾ ಜಯ 0
ಡ್ರಾ 2 ಕಾನ್ಪುರದಲ್ಲಿ ಭಾರತ
ಟೆಸ್ಟ್ 23
ಗೆಲುವು 7
ಸೋಲು 3
ಡ್ರಾ 13 ಪಂದ್ಯ ಆರಂಭ: ಬೆಳಗ್ಗೆ 9.30
ನೇರ ಪ್ರಸಾರ: ಸ್ಪೋರ್ಟ್ಸ್-18