Advertisement
ಕಳೆದ ವರ್ಷ ಪ್ರವಾಸಿ ಇಂಗ್ಲೆಂಡ್ ತಂಡ ವನ್ನು ಮಿಥಾಲಿ ಪಡೆ 2-1 ಅಂತರದಿಂದ ಸೋಲಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಹೀಗಾಗಿ ತವರಿನಲ್ಲಿ ಬಲಿಷ್ಠವಾಗಿರುವ ಭಾರತ ಮತ್ತೂಮ್ಮೆ ಸರಣಿ ಕೈವಶ ಮಾಡಿಕೊಂಡೀತು ಎಂಬುದೊಂದು ನಿರೀಕ್ಷೆ. ಆದರೆ ಸವಾಲು ಸುಲಭದ್ದಲ್ಲ.
ನಾಯಕಿ ಮಿಥಾಲಿ ರಾಜ್ ಟಿ20 ತಂಡ ದಿಂದ ಹೊರಗುಳಿದ್ದರೂ ಏಕದಿನದಲ್ಲಿ ಅತ್ಯು ತ್ತಮ ಫಾರ್ಮ್ನಲ್ಲಿದ್ದಾರೆ. ಇತ್ತೀಚೆಗಷ್ಟೇ 200 ಪಂದ್ಯಗಳನ್ನಾಡಿ ದಾಖಲೆ ಬರೆದ ಮಿಥಾಲಿ ನಾಯಕಿಯ ಆಟವನ್ನು ಮುಂದುವರಿಸುವ ನಿರೀಕ್ಷೆ ಎಲ್ಲರದೂ. ಆದರೆ ಭಾರತದ ಬ್ಯಾಟಿಂಗ್ ಇನ್‌ಫಾರ್ಮ ಆರಂಭಿಕರಾದ ಸ್ಮತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗಸ್ ಅವರನ್ನು ಹೆಚ್ಚು ಅವಲಂಬಿಸಿದೆ. ಇವರಿಬ್ಬರೂ ನ್ಯೂಜಿ ಲ್ಯಾಂಡ್ ಸರಣಿಯಲ್ಲಿ ಭಾರತದ ಗೆಲುವಿನ ರೂವಾರಿಗಳಾಗಿದ್ದರು. ಇವರಿಗೆ ಉಳಿದ ಆಟಗಾರ್ತಿಯರಿಂದಲೂ ಸೂಕ್ತ ಬೆಂಬಲ ಸಿಗಬೇಕಾದುದು ಸದ್ಯದ ಅಗತ್ಯ. ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಗಾಯಾಳಾಗಿ ಕೂಟದಿಂದ ಹೊರಬಿದ್ದಿದ್ದಾರೆ. ಆದರೆ ಇದರಿಂದ ತಂಡಕ್ಕೆ ಹೆಚ್ಚಿನ ಸಮಸ್ಯೆ ಕಾಡಲಿಕ್ಕಿಲ್ಲ. ಇತ್ತೀಚೆಗೆ ಕೌರ್ ಫಾರ್ಮ್ ನಲ್ಲಿಲ್ಲದಿರುವುದೇ ಇದಕ್ಕೆ ಕಾರಣ. ಕೌರ್ ಬದಲಿಗೆ ಹರ್ಲಿನ್ ಡಿಯೋಲ್ ಸ್ಥಾನ ಸಂಪಾದಿಸಿದ್ದಾರೆ.
Related Articles
ಭಾರತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗಳಿಂದ ಕೂಡಿದೆ. ಮಂಧನಾ, ರೋಡ್ರಿಗಸ್ ಬಳಿಕ ಯಾವುದೇ ಆಟಗಾರ್ತಿ ಯರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುತ್ತಿಲ್ಲ. ಇದಕ್ಕೆ ನ್ಯೂಜಿಲ್ಯಾಂಡ್ ಎದುರಿನ ಕೊನೆಯ ಪಂದ್ಯ ಉತ್ತಮ ಉದಾಹರಣೆ. ಅಲ್ಲಿ ಭಾರತ ಕೇವಲ 149ಕ್ಕೆ ಅಲೌಟ್ ಆಗಿತ್ತು.
ಬೌಲಿಂಗ್ ವಿಭಾಗದಲ್ಲಿ ಆಲ್‌ರೌಂಡರ್ ಜೂಲನ್ ಗೋಸ್ವಾಮಿ ತಂಡದ ಅನು ಭವಿ ಆಟಗಾರ್ತಿ.
ಉಳಿದಂತೆ ಶಿಖಾ ಪಾಂಡೆ, ಮಾನ್ಸಿ ಜೋಶಿ, ದೀಪ್ತಿ ಶರ್ಮ, ಏಕ್ತಾ ಬಿಷ್ಟಾ ಮೋಡಿ ಮಾಡಲು ಸಿದ್ಧರಾಗಿದ್ದಾರೆ.
Advertisement
ಇಂಗ್ಲೆಂಡ್ ಹೆಚ್ಚು ಬಲಿಷ್ಠ ಇಂಗ್ಲೆಂಡ್ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಅಭ್ಯಾಸ ಪಂದ್ಯದ ವೇಳೆ ಒಂದು ಕಂತಿನ ಸಾಮರ್ಥ್ಯ ತೋರ್ಪ ಡಿಸಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇನಿಯಲ್ ವ್ಯಾಟ್ ಹಾಗೂ ಹೀತರ್ ನೈಟ್ ಈ ಸರಣಿಯ ಪ್ರಮುಖ ಆಕರ್ಷಣೆಯಾಗ ಬಹುದು. ಆಲ್‌ರೌಂಡರ್ ಸೋಫಿ ಎಕಲ್‌ಸ್ಟೋನ್, ವೇಗಿ ಅನ್ಯಾ ಶ್ರಬೋಲ್ಸ್, ಮಧ್ಯಮ ವೇಗಿ ನಥಾಲಿ ಶಿವರ್ ಬೌಲಿಂಗ್ ಅಪಾಯಕಾರಿ ಯಾದೀತು. ಭಾರತ
ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ತನಿಯಾ ಭಾಟಿಯ, ಜೂಲನ್ ಗೋಸ್ವಾಮಿ, ಆರ್. ಕಲ್ಪನಾ, ಮೋನಾ ಮೆಶ್ರಾಮ್, ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಶಿಖಾ ಪಾಂಡೆ, ಮಾನ್ಸಿ ಜೋಶಿ, ಪೂನಮ್ ರಾವತ್, ಹರ್ಲಿನ್ ಡಿಯೋಲ್. ಇಂಗ್ಲೆಂಡ್
ಹೀತರ್ ನೈಟ್ (ನಾಯಕಿ), ಟಾಮಿ ಬೇಮೌಂಟ್, ಕ್ಯಾಥರಿನ್ ಬ್ರಂಟ್, ಕೇಟ್ ಕ್ರಾಸ್, ಸೋಫಿಯಾ ಡಂಕ್ಲಿ, ಸೋಫಿ ಎಕಲ್‌ಸ್ಟೋನ್, ಜಾರ್ಜಿಯಾ ಎಲ್ವಿಸ್, ಎಲೆಕ್ಸ್ ಹಾಟ್ಲಿ, ಆ್ಯಮಿ ಜೋನ್ಸ್, ಲಾರಾ ಮಾರ್ಷ್, ನಥಾಲಿ ಶಿವರ್, ಅನ್ಯಾ ಶ್ರಬೋಲ್ಸ್, ಸಾರಾ ಟಯ್ಲರ್, ಲಾರೆನ್ ವಿನ್‌ಫೀಲ್ಡ್.