ಲಂಡನ್: ಭಾರತವು ತಮ್ಮ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ( World Test Championship) 2025-2027ರ ಋತುವನ್ನು ಇಂಗ್ಲೆಂಡ್ ವಿರುದ್ದದ ಸರಣಿಯೊಂದಿಗೆ ಆರಂಭಿಸಲಿದೆ. ಮುಂದಿನ ವರ್ಷ ಜೂನ್-ಆಗಸ್ಟ್ ನಲ್ಲಿ ಇಂಗ್ಲೆಂಡ್ ನಲ್ಲಿ (England) ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಮುಂದಿನ ತವರಿನ ಸಮ್ಮರ್ ವೇಳಾಪಟ್ಟಿಯನ್ನು ಗುರುವಾರ (ಆಗಸ್ಟ್ 22) ದಂದು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ ವಿರುದ್ದದ ಸರಣಿಯ ಪಂದ್ಯಗಳನ್ನೂ ಘೋಷಿಸಿದೆ.
ಜೂನ್‌ನಲ್ಲಿ ಲಂಡನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2023-25 ಫೈನಲ್ ನ ನಂತರ ಸರಣಿ ಆರಂಭವಾಗಲಿದೆ. ಲೀಡ್ಸ್ ನಲ್ಲಿರುವ ಹೆಡಿಂಗ್ಲೆ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಲಿದೆ. ಜೂನ್ 20 ರಿಂದ ಮೊದಲ ಪಂದ್ಯ ನಡೆಯಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಓವಲ್ ಗಳು ಸರಣಿಯ ಇತರ ನಾಲ್ಕು ಟೆಸ್ಟ್ ಗಳನ್ನು ಆಯೋಜಿಸುತ್ತದೆ.
2021-22ರ ಪ್ರವಾಸದ ನಂತರ ಭಾರತ ದ್ವಿಪಕ್ಷೀಯ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ಪ್ರವಾಸ ಮಾಡುತ್ತಿರುವುದು ಇದೇ ಮೊದಲು. ಮೊದಲು ವಿರಾಟ್ ಕೊಹ್ಲಿ ತಂಡವನ್ನು ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಸಿದರು. ಆದರೆ ಮರು ನಿಗದಿ ಮಾಡಲಾದ ಕೊನೆಯ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ನಾಯಕತ್ವದಲ್ಲಿ ಭಾರತವು ಕಳೆದುಕೊಂಡಿತು, ಇದರಿಂದಾಗಿ ಇಂಗ್ಲೆಂಡ್ ಸರಣಿಯನ್ನು ಸಮಬಲಗೊಳಿಸಿತು.
ಭಾರತ ಮಹಿಳೆಯರು ಇಂಗ್ಲೆಂಡ್ ನಲ್ಲಿ ಒಂದೇ ಸಮಯದಲ್ಲಿ ಐದು ಟಿ20ಐ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ.
ಮೇ 22 ರಿಂದ ಟ್ರೆಂಟ್ ಬ್ರಿಡ್ಜ್ ನಲ್ಲಿ ಜಿಂಬಾಬ್ವೆ ವಿರುದ್ಧ ಏಕೈಕ ಟೆಸ್ಟ್‌ನೊಂದಿಗೆ ಇಂಗ್ಲೆಂಡ್ ತನ್ನ ಸಮ್ಮರ್ ಆರಂಭಿಸಲಿದೆ. 2003ರ ನಂತರ ಜಿಂಬಾಬ್ವೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯ ಆಡುತ್ತಿರುವುದು ಇದೇ ಮೊದಲು.