ಅಹಮದಾಬಾದ್: ಭಾರತ ಕ್ರಿಕೆಟ್ ತಂಡ 1000ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‌ಗಳ ಸ್ಮರಣೀಯ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ವಿಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ ರೋಹಿತ್ ಶರ್ಮಾ ಬಳಗ , 43.5 ಓವರ್ ಗಳಲ್ಲಿ 176 ರನ್ ಗಳಿಗೆ ಆಲೌಟ್ ಮಾಡಿತು.
ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಾಹಲ್ (4/49) ಮತ್ತು ವಾಷಿಂಗ್ಟನ್ ಸುಂದರ್ (3/30) ಅವರು ಏಳು ವಿಕೆಟ್‌ಗಳನ್ನು ಹಂಚಿಕೊಂದು ವಿಂಡೀಸ್ ಗೆ ಮಾರಕವಾದರು. ಪ್ರಸೀದ್ ೨ ಮತ್ತು ಸಿರಾಜ್ ೧ ವಿಕೆಟ್ ಪಡೆದರು. 79 ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಾಜಿ ನಾಯಕ ಜೇಸನ್ ಹೋಲ್ಡರ್ (57 ರನ್ ) ಆಧಾರವಾದರು. ಕೊನೆಯಲ್ಲಿ ಬಂದ ಫ್ಯಾಬಿಯನ್ ಅಲೆನ್ 29 ಮತ್ತು ಅಲ್ಜಾರಿ ಜೋಸೆಫ್ 13 ರನ್ ಗಳಿಸಿದರು.
ಭಾರತದ ಚೇಸಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ 60(51 ಎಸೆತ) ಆರಂಭಿಕ ಇಶಾನ್ ಕಿಶನ್ 28 , ವಿರಾಟ್ ಕೊಹ್ಲಿ 8 ರನ್ ಗಳಿಸಿದರು. ಕೇವಲ 28 ಓವರ್‌ಗಳಲ್ಲಿ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟಿತು.
ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಸೂರ್ಯಕುಮಾರ್ ಯಾದವ್ ಮತ್ತು ಪಾದರ್ಪಣಾ ಪಂದ್ಯವಾಡಿದ ದೀಪಕ್ ಹೂಡಾ (32 ಎಸೆತಗಳಲ್ಲಿ 26 ರನ್ ಗಳಿಸಿ, ಸೂರ್ಯಕುಮಾರ್ ಯಾದವ್ (36 ಎಸೆತಗಳಲ್ಲಿ 34 ಅಜೇಯರಾಗಿ ಉಳಿದರು. ಐದನೇ ವಿಕೆಟ್‌ಗೆ ಇವರಿಬ್ಬರು ಅಜೇಯ 62 ರನ್‌ಗಳನ್ನು ಸೇರಿಸುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು.