Advertisement

ದೇಶದಲ್ಲಿ ಶೀಘ್ರವೇ 24/7 ವರ್ಚುವಲ್‌ ಕೋರ್ಟ್‌! ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ

09:54 PM Jul 08, 2023 | Team Udayavani |

ನವದೆಹಲಿ: ದೇಶದಲ್ಲಿ ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ದಿನದ 24 ಗಂಟೆಯೂ ವರ್ಚುವಲ್‌ ಆಗಿ ಕಾರ್ಯನಿರ್ವಹಿಸುವ ನ್ಯಾಯಾಲಯಗಳು ಆರಂಭವಾಗಲಿರುವ ಬಗ್ಗೆ ಮುನ್ಸೂಚನೆ ನೀಡಿದೆ. ಅಲ್ಲದೇ, ಈ ನಿಟ್ಟಿನಲ್ಲಿ ಸಮಗ್ರ ಸಂಶೋಧನಾ ಅಧ್ಯಯನಕ್ಕಾಗಿ ನ್ಯಾಯಾಂಗ ಅಕಾಡೆಮಿಗಳು, ಕಾನೂನು ವಿಶ್ವವಿದ್ಯಾಲಯಗಳು, ಐಎಎಂಗಳು ಹಾಗೂ ಐಐಟಿಗಳಿಂದ ಪ್ರಸ್ತಾವನೆಯನ್ನೂ ಕಾನೂನು ಸಚಿವಾಲಯ ಆಹ್ವಾನಿಸಿದೆ.

Advertisement

ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಭೌತಿಕ ವಿಚಾರಣೆಯಿಂದಾಗಿ ಅವುಗಳ ಇತ್ಯರ್ಥ ವಿಳಂಬವಾಗುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಶೀಘ್ರವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಈ ಪ್ರಸ್ತಾಪವನ್ನು ಕಾನೂನು ಸಚಿವಾಲಯ ಕೈಗೆತ್ತಿಕೊಂಡಿದೆ.

ಆಹ್ವಾನಿಸಿರುವ ಪ್ರಸ್ತಾವನೆಗಳು ಆಗಸ್ಟ್‌ 1ರ ವೇಳೆಗೆ ಸಚಿವಾಲಯದ ಕೈಸೇರಲಿದೆ. ಆ ಬಳಿಕ ವರ್ಚುವಲ್‌ ನ್ಯಾಯಾಲಯಗಳ ರೂಪುರೇಷೆಯ ಬಗ್ಗೆ ಸಿದ್ಧತೆ ನಡೆಸಲಾಗುವುದು. ವರ್ಚುವಲ್‌ ನ್ಯಾಯಾಲಯಗಳನ್ನು ವರ್ಚುವಲ್‌ ನ್ಯಾಯಾಧೀಶರೇ ನಿರ್ವಹಿಸುತ್ತಾರೆ. ಅವರ ಕಾರ್ಯವ್ಯಾಪ್ತಿ ಇಡೀ ರಾಜ್ಯಕ್ಕೆ ವಿಸ್ತರಿಸಬಹುದಾಗಿದ್ದು, ದಿನದ 24 ಗಂಟೆಯೂ ಪ್ರಕರಣಗಳ ವಿಚಾರಣೆಗೆ ಅವಕಾಶವಿರಲಿದೆ. ಯಾವುದೇ ವಕೀಲರು, ಅರ್ಜಿದಾರರು, ನ್ಯಾಯಾಧೀಶರು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲದ ಹಿನ್ನೆಲೆ ನ್ಯಾಯಾಲಯದ ಸಮಯವೂ ಉಳಿತಾಯವಾಗಲಿದೆ ಎಂಬುದು ಸಚಿವಾಲಯದ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next