Advertisement
ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ಸೇನೆಯೂ ತೀವ್ರ ಕಟ್ಟೆಚ್ಚರ ವಹಿಸಿದೆ. ಚೀನದ ಸೈನಿಕರು ಗಡಿಯ ಸನಿಹಕ್ಕೆ ಬರುತ್ತಿದ್ದಂತೆ ಭಾರತೀಯ ಯೋಧರೂ ಶಸ್ತ್ರಾಸ್ತ್ರ ಗಳೊಂದಿಗೆ ಗಡಿಯತ್ತ ಧಾವಿಸಿದ್ದಾರೆ. ಚೀನದ ಸೇನೆಯ ಅಟಾಟೋಪ ಎದುರಿಸಲು ಸೇನೆಯೂ ಸರ್ವರೀತಿಯಲ್ಲೂ ಸನ್ನದ್ಧವಾಗಿ ನಿಂತಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಒಂದು ಆಂಗ್ಲ ವೆಬ್‌ಸೈಟ್ ವರದಿ ಮಾಡಿದೆ.
ಅರುಣಾಚಲ ಪ್ರದೇಶದ ಐವರು ಯುವಕರ ಅಪಹರಣ ಪ್ರಕರಣದ ಬೆನ್ನಲ್ಲೇ ಕಳೆದ ಸೋಮವಾರ ಚೀನ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಅರುಣಾಚಲ ಪ್ರದೇಶ ಸಂಬಂಧ ಉದ್ಧಟತನ ಮೆರೆದಿತ್ತು. ಇದುವರೆಗೆ ಚೀನವು ಈ ರಾಜ್ಯಭಾರತದ್ದು ಎಂದು ಗುರುತಿಸಿಯೇ ಇಲ್ಲ ಎಂದಿತ್ತು. ಅದು ಟಿಬೆಟ್‌ನ ಮತ್ತೂಂದು ಭಾಗ ಎಂದೇ ನಂಬಿದ್ದೇವೆ ಎಂದು ಬರೆದು ಭಾರತೀಯ ಸಾರ್ವಭೌಮತೆ ವಿಚಾರದಲ್ಲಿ ಮೂಗುತೂರಿಸಿತ್ತು.
Related Articles
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನದ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ಸರಕಾರವು ಮಾಲ್ಡೀವ್ಸ್ ಜತೆಗೆ ರಕ್ಷಣಾತ್ಮಕ ಒಪ್ಪಂದಗಳಿಗೆ ಸಹಿ ಹಾಕಿದೆ. ಅಮೆರಿಕದ ಈ ನಡೆಯು ಭಾರತಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
Advertisement