Advertisement

ವಿಶ್ವ ಕಲ್ಯಾಣಕ್ಕಾಗಿ ಭಾರತ-ಚೀನ ಒಗ್ಗೂಡಿ ಕೆಲಸಮಾಡಬೇಕಿದೆ: ಮೋದಿ

06:16 PM Apr 27, 2018 | Team Udayavani |

ವುಹಾನ್‌, ಚೀನ : ಇಡಿಯ ವಿಶ್ವವೇ ಕುತೂಹಲದಿಂದ ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ  ಜಿನ್‌ ಪಿಂಗ್‌ ನಡುವಿನ ಶೃಂಗಸಭೆಯು ಚೀನದ ವುಹಾನ್‌ನಲ್ಲಿ ಇಂದು ಶುಕ್ರವಾರ ಆರಂಭವಾಯಿತು. 

Advertisement

ಡೋಕ್ಲಾಂ ವಿವಾದ ಬಳಿಕ ಭಾರತ – ಚೀನ ದ್ವಿಪಕ್ಷೀಯ ಬಾಂಧವ್ಯದಲ್ಲಿ  ಬಿರುಕು ಕಂಡುಬಂದಿತ್ತು. ಅದೀಗ ಉಭಯ ನಾಯಕರ ದ್ವಿಪಕ್ಷೀಯ ಮಾತುಕತೆಯಲ್ಲಿ ಸೌಹಾರ್ದಯುತವಾಗಿ ಮುಚ್ಚಿಹೋಗುವುದನ್ನು ಎದುರು ನೋಡಲಾಗುತ್ತಿದೆ. ಅಂತೆಯೇ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ವ್ಯಾಖ್ಯಾನ ಲಭಿಸುವುದನ್ನು ಹಾರೈಸಲಾಗುತ್ತಿದೆ.

ಚೀನ ನೀಡಿರುವ ಭವ್ಯ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ. 

ಬೀಜಿಂಗ್‌ನಿಂದ ಹೊರಗೆ ಚೀನ ಅಧ್ಯಕ್ಷರಿಂದ ಎರಡು ಬಾರಿ ಸ್ವಾಗತ ಪಡೆದಿರುವ ಭಾರತೀಯ ಪ್ರಧಾನಿ ನಾನು; ಈ ಬಗ್ಗೆ ಭಾರತದ ಸಮಸ್ತ ಜನತೆ ಹೆಮ್ಮೆ ಪಡುತ್ತದೆ ಎಂದು ಮೋದಿ ವರ್ಣಿಸಿದ್ದಾರೆ. 

ಸರಕಾರದ ವತಿಯಿಂದ ನೀಡಲಾದ ವಿಧ್ಯುಕ್ತ ಹಾಗೂ ಶಿಷ್ಟಾಚಾರ ಯುಕ್ತವಾದ ಸ್ವಾಗತದ ಬಳಿಕ ಪ್ರಧಾನಿ ಮೋದಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಚೀನದ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. 

Advertisement

ಭಾರತ-ಚೀನ ಹೊಣೆಗಾರಿಕೆ ಅತ್ಯಪಾರವಾದದ್ದು; ವಿಶ್ವದ ಶೇ.40ರಷ್ಟು ಜನರ ಕಲ್ಯಾಣಕ್ಕಾಗಿ  ಉಭಯ ದೇಶಗಳು ಕೆಲಸ ಮಾಡುವ ಹೊಣೆ ಹೊಂದಿವೆ. ಆದುದರಿಂದ ಎರಡೂ ದೇಶಗಳು ಒಗ್ಗೂಡಿ ಕಾರ್ಯ ನಿರ್ವಹಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದು ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next