Advertisement

ಭಾರತ- ಚೀನಾ ನಡುವೆ 10ನೇ ಸುತ್ತಿನ ಸೇನಾ ಮಾತುಕತೆ

09:29 PM Feb 20, 2021 | Team Udayavani |

ಲಡಾಖ್‌: ಪ್ಯಾಂಗಾಂಗ್‌ ತೀರದಲ್ಲಿ ಭಾರತ- ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ 10ನೇ ಸುತ್ತಿನ ಮಾತುಕತೆ ಶನಿವಾರ ಮೋಲ್ಡೊದಲ್ಲಿ ನಡೆದಿದೆ.

Advertisement

ಚೀನಾ ಬದಿಯ ಮೋಲ್ಡೊ ಗಡಿ ಪಾಯಿಂಟ್‌ನಲ್ಲಿ ಬೆಳಗ್ಗೆ 10ಕ್ಕೆ ಆರಂಭಗೊಂಡ ಸಭೆ ರಾತ್ರಿವರೆಗೂ ಮುಂದುವರಿದಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ. ಆದಷ್ಟು ಶೀಘ್ರದಲ್ಲಿ ಪೂರ್ವ ಲಡಾಖ್‌ನ ಡೆಪ್ಸಾಂಗ್‌, ಹಾಟ್‌ ಸ್ಪ್ರಿಂಗ್ಸ್‌ ಮತ್ತು ಗಾಗ್ರಾ ವಲಯಗಳ  ಬಿಕ್ಕಟ್ಟಿನ ಕೇಂದ್ರಗಳಿಂದಲೂ ಉಭಯ ರಾಷ್ಟ್ರಗಳು ತ್ವರಿತ ಸೇನೆ ವಾಪಸಾತಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಲೆ.ಜ. ಪಿಜಿಕೆ ಮೆನನ್‌ ವಹಿಸಿದ್ದರೆ, ಚೀನಾ ಪರವಾಗಿ ದಕ್ಷಿಣ ಕ್ಸಿನ್ಜಿಯಾಂಗ್‌ನ ಕಮಾಂಡರ್‌ ಮುಂದಾಳತ್ವ ವಹಿಸಿದ್ದರು.

ಇದನ್ನೂ ಓದಿ:ಬರದ ನಾಡಿನಲ್ಲೊಬ್ಬಳು ‘ಭಗೀರಥೆ’…ಜಲಕ್ರಾಂತಿಗೆ ಸಾಕ್ಷಿಯಾದಳು 19 ವರ್ಷದ ತರುಣೆ  

Advertisement

Udayavani is now on Telegram. Click here to join our channel and stay updated with the latest news.

Next