ನ್ಯೂಯಾರ್ಕ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಾರಂಭವಾಗಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾ ಯುದ್ಧ ನಿಲ್ಲಿಸಬೇಕು, ತಕ್ಷಣ ಸೇನೆಯನ್ನು ಉಕ್ರೇನ್ ನಿಂದ ಹಿಂದಕ್ಕೆ ಕರೆಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತು.
193 ಸದಸ್ಯಬಲದ ಸಾಮಾನ್ಯ ಸಭೆಯಲ್ಲಿ 141 ಸದಸ್ಯರು ನಿರ್ಣಯದ ಪರವಾಗಿಯೂ, ಏಳು ಸದಸ್ಯರು ವಿರುದ್ಧವಾಗಿಯೂ ಮತ ಹಾಕಿದರು. ಭಾರತ ಮತ್ತು ಚೀನಾ ಸೇರಿದಂತೆ 32 ಸದಸ್ಯ ರಾಷ್ಟ್ರಗಳು ತಟಸ್ಥ ಧೋರಣೆ ತೋರಿದವು.
ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಗಾಗಿ ಪ್ರತಿಪಾದಿಸುವಾಗ, ಭಾರತವು ರಷ್ಯಾ ವಿರುದ್ಧದ ಮತದಾನದಿಂದ ದೂರ ಉಳಿಯಿತು.
ಇದನ್ನೂ ಓದಿ:ಪ್ರೀತಂ ಗೌಡರಿಗೆ ಸವಾಲು; ಹಾಸನದಿಂದ ರೇವಣ್ಣ ಸ್ಪರ್ಧೆ ಬಹುತೇಕ ಖಚಿತ
ಯುಎನ್ ಚಾರ್ಟರ್ ಗೆ ಅನುಗುಣವಾಗಿ ಉಕ್ರೇನ್ ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸಾಧಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲವನ್ನು ದ್ವಿಗುಣಗೊಳಿಸಲು ಸದಸ್ಯ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ವಿಶ್ವಸಂಸ್ಥೆ ನಿರ್ಣಯವು ಕರೆ ನೀಡಿದೆ.