ವಾಷಿಂಗ್ಟನ್ : ಪಾಕಿಸ್ಥಾನದ ನಡತೆಯನ್ನು ಬದಲಾಯಿಸುವ ಮೂಲಕ ಅಲ್ಲಿ ರಾಜಕೀಯ ಹಾಗೂ ಆರ್ಥಿಕ ಸ್ಥಿರತೆಯನ್ನು ಪುನರ್ ಸ್ಥಾಪಿಸುವುದಕ್ಕಾಗಿ ಭಾರತದ ಸಹಾಯವನ್ನು ಪಡೆಯಬಹುದಾಗಿದೆ ಎಂದು ಶ್ವೇತಭವನ ಅಭಿಪ್ರಾಯಪಟ್ಟಿದೆ.
ಭಾರತವು ಅಮೆರಿಕದ ಅತ್ಯಂತ ಮಹತ್ವದ ಪ್ರಾದೇಶಿಕ ವ್ಯೂಹಗಾರಿಕೆಯ ಪಾಲುದಾರ ದೇಶವಾಗಿರುವುದರಿಂದ ಅಫ್ಘಾನಿಸ್ಥಾನವನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಆಧುನೀಕರಿಸುವ ಯತ್ನದಲ್ಲಿ ಅಮೆರಿಕವು ಭಾರತದ ನೆರವನ್ನು ಪಡೆಯಬಹುದಾಗಿದೆ ಎಂದು ಅಮೆರಿಕದ ವಿದೇಶ ಸಚಿವ ರೆಕ್ಸ್ ಟಿಲ್ಲರ್‌ಸನ್ ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನಿಸ್ಥಾನ ಕುರಿತ ಅಮೆರಿಕ ವ್ಯೂಹಗಾರಿಕೆ ನೀತಿಯನ್ನು ಪ್ರಕಟಿಸಿದ ಒಂದು ದಿನದ ತರುವಾಯ ಟಿಲ್ಲರ್‌ಸನ್ ಅವರಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.
ಟಿಲ್ಲರ್‌ಸನ್ ಅವರು ಅಪಾ^ನಿಸ್ಥಾನದ ಆರ್ಥಿಕ ಅಭ್ಯುದಯದಲ್ಲಿ ಭಾರತ ವಹಿಸಿರುವ ರಚನಾತ್ಮಕ ಪಾತ್ರವನ್ನು ಬಹುವಾಗಿ ಶ್ಲಾ ಸಿದರು.
ಪಾಕಿಸ್ಥಾನದಲ್ಲಿನ ರಾಜಕೀಯ ಅಸ್ಥಿರತೆಯನ್ನು ನಿವಾರಿಸುವ ಕೆಲಸವನ್ನು ಅಮೆರಿಕ ಏಕಾಂಗಿಯಾಗಿ ಮಾಡಲಾರದು; ಆದುದರಿಂದ ಪಾಕ್ ನಡತೆಯನ್ನು ಬದಲಾಯಿಸುವ ದಿಶೆಯಲ್ಲಿ ಭಾರತದ ಸಹಾಯ ಪಡೆಯುವುದು ಅಗತ್ಯವಾಗುವುದು ಎಂದು ಟಿಲ್ಲರ್‌ಸನ್ ಹೇಳಿದರು.