Advertisement

Achievement: ಎರಡನೇ ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾದ ಅಧಿತ್ರಿ ಹುಣಸೇಕೊಪ್ಪ

11:45 AM Mar 26, 2024 | Team Udayavani |

ಶಿರಸಿ: ತಾಲೂಕಿನ ಹುಣಸೇಕೊಪ್ಪದ ಐದೂವರೆ ವರ್ಷದ ಅಧಿತ್ರಿ ನಾಗರಾಜ ಹೆಗಡೆ ಇವಳು ಎರಡನೆಯ ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿದ್ದಾಳೆ.

Advertisement

ಕರ್ನಾಟಕದ ಇತಿಹಾಸ, ರಾಜಮನೆತನಗಳು ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ದೇವಸ್ಥಾನಗಳು, ಪ್ರಸಿದ್ಧ ಕಂಪನಿಗಳು, ಕರ್ನಾಟಕದ ಚಿಹ್ನೆಗಳು, ವಿಧಾನಸಭಾ ಕ್ಷೇತ್ರಗಳು ಹೀಗೆ ಕರ್ನಾಟಕದ ಕುರಿತು 700ಕ್ಕೂ ಹೆಚ್ಚು ರಸಪ್ರಶ್ನೆಗಳನ್ನು ಕನ್ನಡದಲ್ಲಿ ಉತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಆಯ್ಕೆಯಾಗಿದ್ದಾಳೆ. ಕರ್ನಾಟಕದ ಬಗ್ಗೆ ಹೆಚ್ಚು ಜ್ಞಾನಹೊಂದಲು ತುಂಬಾ ಆಸಕ್ತಿ ಹೊಂದಿದ್ದಾಳೆ.

ಎರಡು ವರ್ಷದ ಹತ್ತು ತಿಂಗಳಾಗಿದ್ದಾಗ ಮೊದಲ ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಆಯ್ಕೆ ಆಗಿದ್ದಳು. ಶಂಕರ ಹೆಗಡೆ ಮತ್ತು ಮಂಜುಳಾ ಹೆಗಡೆಯವರ ಮೊಮ್ಮಗಳು. ಉಡುಪಿಯಲ್ಲಿ ನೆಲೆಸಿರುವ ನಾಗರಾಜ ಹೆಗಡೆ ಮತ್ತು ಸುಚೇತಾ ಹೆಗಡೆಯವರ ಮಗಳಾಗಿದ್ದಾಳೆ.

ಇದನ್ನೂ ಓದಿ: Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next