Advertisement

ಇಂದಿನಿಂದ ಅಂಧರ ಕ್ರಿಕೆಟ್‌ ವಿಶ್ವಕಪ್‌: ಯುಎಇಗೆ ತೆರಳಿದ ಭಾರತ!

06:15 AM Jan 07, 2018 | Team Udayavani |

ಕರಾಚಿ: 5ನೇ ಆವೃತ್ತಿ ಅಂಧರ ಕ್ರಿಕೆಟ್‌ ವಿಶ್ವಕಪ್‌ ಭಾನುವಾರದಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಆದರೆ ಭಾರತ ಶನಿವಾರ ಯುಎಇಗೆ ತೆರಳಿದೆ. ಪಾಕಿಸ್ತಾನದಲ್ಲಿ ಆಡಲು ಭಾರತ ತಂಡಕ್ಕೆ ಕೇಂದ್ರದಿಂದ ಅನುಮತಿ ಸಿಗದಿರುವುದೇ ಇದಕ್ಕೆ ಕಾರಣ! ಭಾರತದ ಪಂದ್ಯಗಳೆಲ್ಲ ಯುಎಇಯಲ್ಲೇ ನಡೆಯಲಿವೆ. ಗಮನಾರ್ಹ ಸಂಗತಿಯೆಂದರೆ ಒಂದು ವೇಳೆ ಭಾರತ ಫೈನಲ್‌ಗೇರಿದರೆ ಫೈನಲ್‌ ಪಂದ್ಯವೂ ಶಾರ್ಜಾಕ್ಕೆ ಸ್ಥಳಾಂತರವಾಗಲಿದೆ.

Advertisement

ಈ ಕೂಟದಲ್ಲಿ ಭಾರತ ಹಾಲಿ ಚಾಂಪಿಯನ್‌. 2014ರಲ್ಲಿ ಪಾಕಿಸ್ತಾನವನ್ನು ಸೋಲಿಸಿಯೇ ಭಾರತ ಕಿರೀಟ ಗೆದ್ದಿತ್ತು. ಈಗಲೂ ಬಲಿಷ್ಠ ತಂಡವಾಗಿಯೇ ಇರುವ ಭಾರತ ಫೈನಲ್‌ಗೇರುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಪಂದ್ಯ ಸ್ಥಳಾಂತರಗೊಳ್ಳುವುದು ಅನಿವಾರ್ಯವಾಗುವ ಸಾಧ್ಯತೆಯೇ ಹೆಚ್ಚು.

ನಿಗದಿಯಂತೆ ಭಾರತ ತನ್ನ ಮೊದಲ ಪಂದ್ಯವನ್ನು ಸೋಮವಾರ ಪಾಕಿಸ್ತಾನದ ವಿರುದ್ಧ ಫೈಸಲಾಬಾದ್‌ನಲ್ಲಿ ಆಡಬೇಕಿತ್ತು. ಅದೀಗ ಯುಎಇಯಲ್ಲೇ ನಡೆಯಲಿದೆ. ಭಾರತವಲ್ಲದೇ ವೆಸ್ಟ್‌ಇಂಡೀಸ್‌ ಮತ್ತು ಆಸ್ಟ್ರೇಲಿಯಾ ತಂಡಗಳು ಯುಎಇಯಲ್ಲೇ ಆಡಲಿವೆ. ಭದ್ರತಾ ಕಾರಣಗಳಿಂದಾಗಿ ಈ ತಂಡಗಳು ಪಾಕ್‌ಗೆ ತೆರಳಲು ಒಪ್ಪಿಲ್ಲ.

ಭಾರತ ತಂಡಕ್ಕೆ ಪಾಕ್‌ಗೆ ಅವಕಾಶ ಸಿಗಲಿದೇ ಎಂದೇ ಆರಂಭದಲ್ಲಿ ಭಾವಿಸಲಾಗಿತ್ತು. ಕೂಟ ಆರಂಭವಾಗುವ ದಿನಾಂಕ ಹತ್ತಿರ ಬಂದರೂ ಸರ್ಕಾರದ ಒಪ್ಪಿಗೆ ಸಿಗದಿರುವುದರಿಂದ ಸ್ಥಳಾಂತರದ ನಿರ್ಧಾರ ಮಾಡಲಾಯಿತು. ಈ ಬಗ್ಗೆ ಪಾಕಿಸ್ತಾನ ಅಂಧರ ಕ್ರಿಕೆಟ್‌ ಮಂಡಳಿ ಬೇಸರ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next