Advertisement

Olympics: ಒಲಿಂಪಿಕ್ಸ್‌ ಗೆ ಭಾರತ ಬಿಡ್‌: ಮೋದಿ

10:32 PM Oct 14, 2023 | Team Udayavani |

ಹೊಸದಿಲ್ಲಿ: 2036ರ ಒಲಿಂಪಿಕ್ಸ್‌ಗೆ ಬಿಡ್‌ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆಯುತ್ತಿರುವ ಐಒಸಿಯ (ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ) 141ನೇ ಸಭೆಯಲ್ಲಿ ಮೋದಿ ಈ ಘೋಷಣೆ ಮಾಡಿದರು.

Advertisement

ಒಲಿಂಪಿಕ್ಸ್‌ ಆತಿಥ್ಯ ವಹಿಸಲು ನಮಗೆ ಬಹಳ ಉತ್ಸಾಹವಿದೆ. ಮಾತ್ರವಲ್ಲ, 2029ರ ಯುವ ಒಲಿಂಪಿಕ್ಸ್‌ಗೂ ಆತಿಥ್ಯ ವಹಿಸುವ ಆಸಕ್ತಿ ದೇಶಕ್ಕಿದೆ ಎಂಬುದಾಗಿ ಮೋದಿ ಹೇಳಿದರು. ಅವರು ಭಾರತದ ಆಸಕ್ತಿಯನ್ನು ಪ್ರಕಟಿಸುತ್ತಿದ್ದಂತೆಯೆ ಐಒಸಿ ಸದಸ್ಯರು ಇದನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಬೆಂಬಲಿಸಿದರು.

ಭಾರತ ಒಲಿಂಪಿಕ್ಸ್‌ ಆತಿಥ್ಯಕ್ಕೆ ಸಂಬಂಧಿಸಿದಂತೆ ಬಹಳ ಕಾಲದಿಂದ ಮಾತುಕತೆಗಳು ಚಾಲ್ತಿಯಲ್ಲಿದ್ದವು. ಅಷ್ಟರಲ್ಲೇ ಆ ಸುದ್ದಿ ತಣ್ಣಗಾಗುತ್ತಿತ್ತು. ಭಾರತದಂತಹ ದೇಶಕ್ಕೆ ಒಲಿಂಪಿಕ್ಸ್‌ ಆತಿಥ್ಯ ಸೂಕ್ತವಲ್ಲ ಎಂದೂ ಹೇಳಲಾಗಿತ್ತು. ಇದೀಗ ದೇಶ ಸಿದ್ಧವಿದೆ ಎಂದು ಪ್ರಧಾನಿಯೇ ಘೋಷಿಸಿದ್ದಾರೆ. ಅಲ್ಲಿಗೆ ಭಾರತ ಬಿಡ್‌ ಸಲ್ಲಿಸುವುದು ಖಾತ್ರಿಯಾಗಿದೆ. ಆ ವೇಳೆ ಭಾರತ ಹಲವು ಇತರ ಆಸಕ್ತ ದೇಶಗಳ ಪೈಪೋಟಿ ಎದುರಿಸಬೇಕಾಗುತ್ತದೆ. ಅಲ್ಲಿ ಗೆದ್ದರೆ ಮಾತ್ರ ಆತಿಥ್ಯದ ಅವಕಾಶ ಸಿಗಲಿದೆ. ಇನ್ನೊಂದೆರಡು ವರ್ಷಗಳ ಒಳಗೆ ಭಾರತ ಆತಿಥ್ಯ ವಹಿಸುತ್ತದೋ, ಇಲ್ಲವೋ ಎನ್ನುವುದು ಖಚಿತವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next