Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ಮಾರ್ಟಿನ್ ಗಪ್ಟಿಲ್, ಮಾರ್ಕ್ ಚಾಪ್‌ಮನ್ ಅವರ ಅರ್ಧ ಶತಕಗಳ ನೆರವಿನಿಂದ 6 ವಿಕೆಟಿಗೆ 164 ರನ್ ಗಳಿಸಿತು. ಭಾರತ 19.4 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್ ಬಾರಿಸಿತು. ಸರಣಿಯ 2ನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ನಡೆಯಲಿದೆ.
ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಭಾರತದ ಸರದಿಯ ಆಕರ್ಷಣೆ ಎನಿಸಿತು. 40 ಎಸೆತ ಎದುರಿಸಿದ ಸೂರ್ಯ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 62 ರನ್ ಚಚ್ಚಿದರು. ನಾಯಕ ರೋಹಿತ್ ಶರ್ಮ 36 ಎಸೆತಗಳಿಂದ 48 ರನ್ ಹೊಡೆದರು (5 ಬೌಂಡರಿ, 2 ಸಿಕ್ಸರ್). ಕೆ.ಎಲ್. ರಾಹುಲ್ ಗಳಿಕೆ 15 ರನ್. ರಾಹುಲ್ ಅವರೊಂದಿಗೆ ಮೊದಲ ವಿಕೆಟಿಗೆ 5.1 ಓವರ್‌ಗಳಿಂದ 50 ರನ್ ಪೇರಿಸಿದ ರೋಹಿತ್, ದ್ವಿತೀಯ ವಿಕೆಟಿಗೆ ಸೂರ್ಯಕುಮಾರ್ ಜತೆಗೂಡಿ 59 ರನ್ ಹೊಡೆದರು. ಟ್ರೆಂಟ್ ಬೌಲ್ಟ್ ಈ ಜೋಡಿಯನ್ನು ಬೇರ್ಪಡಿಸಿದರು.
Related Articles
Advertisement
ಚಾಪ್‌ಮನ್-ಗಪ್ಟಿಲ್ ಶತಕದ ಜತೆಯಾಟಕಿವೀಸ್ ಆರಂಭ ಆಘಾತಕಾರಿಯಾಗಿತ್ತು. ಟಿ20 ವಿಶ್ವಕಪ್ ಸೆಮಿಫೈನಲ್ ಹೀರೋ ಡ್ಯಾರಿಲ್ ಮಿಚೆಲ್ “ಗೋಲ್ಡನ್ ಡಕ್’ ಸಂಕಟಕ್ಕೆ ಸಿಲುಕಿದರು. ಭುವನೇಶ್ವರ್ ಕುಮಾರ್ ಪಂದ್ಯದ ಮೊದಲ ಓವರಿನ 3ನೇ ಎಸೆತದಲ್ಲೇ ಆವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಒನ್‌ಡೌನ್ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ತಂಡವನ್ನು ಮೇಲೆತ್ತುವ ಪ್ರಯತ್ನದಲ್ಲಿ ಧಾರಾಳ ಯಶಸ್ಸು ಕಾಣತೊಡಗಿದರು. ಪವರ್ ಪ್ಲೇ ಅವಧಿಯ ಬಹುತೇಕ ಎಸೆತಗಳನ್ನು ಎದುರಿಸಿ ಬಿರುಸಿನ ಆಟವಾಡಿದರು. ಮೊದಲ 6 ಓವರ್‌ಗಳಲ್ಲಿ ಕಿವೀಸ್ 41 ರನ್ ಮಾಡಿತು. ಇದರಲ್ಲಿ ಚಾಪ್‌ಮನ್ ಪಾಲೇ 30 ರನ್ ಆಗಿತ್ತು. ಗಪ್ಟಿಲ್ ಇನ್ನೊಂದೆಡೆ ನಿಂತು ಆಡುತ್ತ ಜತೆಗಾರನಿಗೆ ಉತ್ತಮ ಬೆಂಬಲ ನೀಡತೊಡಗಿದರು. ಭಾರತದ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚುತ್ತ ಹೋಯಿತು. 10 ಓವರ್ ಮುಗಿಯುವಾಗ ಕಿವೀಸ್ ಸ್ಕೋರ್ ಒಂದೇ ವಿಕೆಟಿಗೆ 65ಕ್ಕೆ ಏರಿತ್ತು. ಅಕ್ಷರ್ ಪಟೇಲ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಮಾರ್ಕ್ ಚಾಪ್‌ಮನ್ ನ್ಯೂಜಿಲ್ಯಾಂಡ್ ಪರ ತಮ್ಮ ಚೊಚ್ಚಲ ಅರ್ಧ ಶತಕ ಪೂರ್ತಿಗೊಳಿಸಿದರು. ಅವರ ಇನ್ನೊಂದು ಟಿ20 ಫಿಫ್ಟಿ ಹಾಂಕಾಂಗ್ ಪರ ದಾಖಲಾಗಿತ್ತು. 10ನೇ ಓವರ್ ಬಳಿಕ ಗಪ್ಟಿಲ್ ಕೂಡ ಮುನ್ನುಗ್ಗಿ ಬೀಸತೊಡಗಿದರು. 18ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಅವರು 42 ಎಸೆತಗಳಿಂದ 70 ರನ್ ಬಾರಿಸಿದರು. ಸಿಡಿಸಿದ್ದು 4 ಸಿಕ್ಸರ್ ಹಾಗೂ 3 ಫೋರ್. ಇದನ್ನೂ ಓದಿ:ಟಿ20 ರ್‍ಯಾಂಕಿಂಗ್: ಒಂದು ಸ್ಥಾನ ಕುಸಿದ ರಾಹುಲ್ 12.4 ಓವರ್‌ಗಳಲ್ಲಿ ನ್ಯೂಜಿಲ್ಯಾಂಡಿನ 100 ರನ್ ಹರಿದು ಬಂತು. ಜತೆಗೆ ಗಪ್ಟಿಲ್-ಚಾಪ್‌ಮನ್ ಜೋಡಿಯ ಶತಕದ ಜತೆಯಾಟವೂ ಪೂರ್ತಿಗೊಂಡಿತು. 14ನೇ ಓವರ್‌ನಲ್ಲಿ ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸಿದರು. 63 ರನ್ ಬಾರಿಸಿದ ಚಾಪಮನ್ ಬೌಲ್ಡ್ ಆದರು. ಭರ್ತಿ 50 ಎಸೆತ ಎದುರಿಸಿದ ಅವರು 6 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಅದೇ ಓವರ್‌ನಲ್ಲಿ ಗ್ಲೆನ್ ಫಿಲಿಪ್ಸ್ ಅವರನ್ನು ಅಶ್ವಿನ್ ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಗಪ್ಟಿಲ್-ಚಾಮ್‌ಮನ್ ಜೋಡಿಯಿಂದ 2ನೇ ವಿಕೆಟಿಗೆ 109 ರನ್ ಹರಿದು ಬಂತು. ಇದು ಎಲ್ಲ ವಿಕೆಟ್‌ಗಳಿಗೂ ಅನ್ವಯವಾಗುವಂತೆ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ದಾಖಲಿಸಿದ ಅತೀ ದೊಡ್ಡ ಜತೆಯಾಟವಾಗಿದೆ. ವೆಂಕಟೇಶ್ ಅಯ್ಯರ್ ಪದಾರ್ಪಣೆ
ಭಾರತದ ಪರ ಐಪಿಎಲ್ ಹೀರೋ, ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಟಿ20 ಪದಾರ್ಪಣೆ ಮಾಡಿದರು. ಜತೆಗೆ ಶ್ರೇಯಸ್ ಅಯ್ಯರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್ ಆಡುವ ಬಳಗಕ್ಕ ಮರಳಿದರು. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದ ನ್ಯೂಜಿಲ್ಯಾಂಡ್ ತಂಡದ ನಾಲ್ವರು ಹೊರಗುಳಿದರು. ಇವರೆಂದರೆ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್, ಐಶ್ ಸೋಧಿ ಮತ್ತು ಆ್ಯಡಂ ಮಿಲ್°. ಇವರ ಬದಲು ಚಾಪ್‌ಮನ್, ಆ್ಯಸ್ಟಲ್, ರವೀಂದ್ರ ಮತ್ತು ಫರ್ಗ್ಯುಸನ್ ಆಡಲಿಳಿದರು. ದ್ರಾವಿಡ್-ರೋಹಿತ್: ಹೀಗೊಂದು ಸ್ವಾರಸ್ಯ
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ, ರೋಹಿತ್ ಶರ್ಮ ನಾಯಕರಾಗಿ ಜೈಪುರದಲ್ಲಿ ಮೊದಲ ಹೆಜ್ಜೆ ಇರಿಸಿದರು. ಈ ಸಂದರ್ಭದಲ್ಲಿ ಇವರಿಬ್ಬರ ನಡುವಿನ ಸ್ವಾರಸ್ಯಕರ ಸಂಗತಿಯೊಂದನ್ನು ಗಮನಿಸಬೇಕಿದೆ. ರೋಹಿತ್ ಶರ್ಮ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಆರಂಭಿಸಿದ್ದು ಏಕದಿನ ಪಂದ್ಯದ ಮೂಲಕ. ಅದು 2007ರ ಐರ್ಲೆಂಡ್ ಎದುರಿನ ಬೆಲ್‌ಫಾಸ್ಟ್ ಪಂದ್ಯವಾಗಿತ್ತು. ಅಲ್ಲಿ ಭಾರತ ತಂಡದ ನಾಯಕರಾಗಿದ್ದವರು ಬೇರೆ ಯಾರೂ ಅಲ್ಲ, ರಾಹುಲ್ ದ್ರಾವಿಡ್! ಈಗ ಜೈಪುರ ಪಂದ್ಯದ ಮೂಲಕ ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಇನ್ನೊಂದೆಡೆ ರಾಹುಲ್ ದ್ರಾವಿಡ್ ಕೋಚ್ ಆಗಿ ನೂತನ ಜವಾಬ್ದಾರಿ ವಹಿಸಿಕೊಂಡರು! ಸ್ಕೋರ್ ಪಟ್ಟಿ
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಸಿ ಶ್ರೇಯಸ್ ಬಿ ಚಹರ್ 70
ಡ್ಯಾರಿಲ್ ಮಿಚೆಲ್ ಬಿ ಭುವನೇಶ್ವರ್ 0
ಮಾರ್ಕ್ ಚಾಪ್‌ಮನ್ ಬಿ ಅಶ್ವಿನ್ 63
ಗ್ಲೆನ್ ಫಿಲಿಪ್ಸ್ ಎಲ್‌ಬಿಡಬ್ಲ್ಯು ಅಶ್ವಿನ್ 0
ಸಿಫರ್ಟ್ ಸಿಸೂರ್ಯಕುಮಾರ್ ಬಿ ಭುವನೇಶ್ವರ್ 12
ರವೀಂದ್ರ ಬಿ ಸಿರಾಜ್ 7
ಮಿಚೆಲ್ ಸ್ಯಾಂಟ್ನರ್ ಔಟಾಗದೆ 4
ಟಿಮ್ ಸೌಥಿ ಔಟಾಗದೆ 0
ಇತರ 8
ಒಟ್ಟು (6 ವಿಕೆಟಿಗೆ) 164
ವಿಕೆಟ್ ಪತನ:1-1, 2-110, 3-110, 4-150, 5-153, 6-162.
ಬೌಲಿಂಗ್;ಭುವನೇಶ್ವರ್ ಕುಮಾರ್ 4-0-24-2
ದೀಪಕ್ ಚಹರ್ 4-0-42-1
ಮೊಹಮ್ಮದ್ ಸಿರಾಜ್ 4-0-39-1
ಆರ್. ಅಶ್ವಿನ್ 4-0-23-2
ಅಕ್ಷರ್ ಪಟೇಲ್ 4-0-31-0 ಭಾರತ
ಕೆ.ಎಲ್ ರಾಹುಲ್ ಸಿ ಚಾಪ್‌ಮನ್ ಬಿ ಸ್ಯಾಂಟ್ನರ್ 15
ರೋಹಿತ್ ಶರ್ಮ ಸಿ ರವೀಂದ್ರ ಬಿ ಬೌಲ್ಟ್ 48
ಸೂರ್ಯಕುಮಾರ್ ಬಿ ಬೌಲ್ಟ್ 62
ರಿಷಭ್ ಪಂತ್ ಔಟಾಗದೆ 17
ಶ್ರೇಯಸ್ ಅಯ್ಯರ್ ಸಿ ಬೌಲ್ಟ್ ಬಿ ಸೌಥಿ 5
ವೆಂಕಟೇಶ್ ಸಿ ರವೀಂದ್ರ ಬಿ ಮಿಚೆಲ್ 4
ಅಕ್ಷರ್ ಪಟೇಲ್ ಔಟಾಗದೆ 1
ಇತರ 14
ಒಟ್ಟು (19.4 ಓವರ್‌ಗಳಲ್ಲಿ 5ವಿಕೆಟಿಗೆ) 166
ವಿಕೆಟ್ ಪತನ:1-50, 2-109, 3-144, 4-155, 5-160.
ಬೌಲಿಂಗ್; ಟಿಮ್ ಸೌಥಿ 4-0-40-1
ಟ್ರೆಂಟ್ ಬೌಲ್ಟ್ 4-0-31-2
ಲಾಕಿ ಫರ್ಗ್ಯುಸನ್ 4-0-24-0
ಮಿಚೆಲ್ ಸ್ಯಾಂಟ್ನರ್ 4-0-19-1
ಟೋಡ್ ಆ್ಯಸ್ಟಲ್ 3-0-34-0
ಡ್ಯಾರಿಲ್ ಮಿಚೆಲ್ 0.4-0-11-1