Advertisement
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ಎಂಟು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದರೆ, ಭಾರತ 18.5 ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಭರ್ಜರಿ ಬ್ಯಾಟಿಂಗ್ ನಡೆಸಿದ ಆರಂಭಿಕರಾದ ಶಿಖರ್ ಧವನ್ ಮತ್ತು ನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ರೋಹಿತ್ ಭರ್ಜರಿ ನಾಲ್ಕು ಸಿಕ್ಸರ್ ಗಳೊಂದಿಗೆ 50 ರನ್ ಗಳಿಸಿದರೆ, ಧವನ್ 30 ರನ್ ಗಳಿಸಿ ಔಟಾದರು. ನಂತರ ಧೋನಿ ಜೊತೆಗೂಡಿದ ರಿಷಭ್ ಪಂತ್ 40 ಗಳಿಸಿ ಅಜೇಯರಾದರು. ಪಂತ್ ಗೆ ಉತ್ತಮ ಸಾಥ್ ನೀಡಿದ ಧೋನಿ 20 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದರು. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಕಿವೀಸ್ 158 ರನ್ ಗಳ ಸಾಧಾರಣ ಮೊತ್ತ ಗಳಿಸಿತ್ತು. ಮಧ್ಯಮ ಕ್ರಮಾಂಕದ ಆಟಗಾರ ಕಾಲಿನ್ ಡಿ ಗ್ರಾಂಡ್ ಹೋಮ್ 50 ರನ್ ಬಾರಿಸಿ ತಂಡದ ಟಾಪ್ ಸ್ಕೊರರ್ ಆದರು. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಕೃನಾಲ್ ಪಾಂಡ್ಯಾ ತನ್ನ ನಾಲ್ಕು ಓವರ್ ನಲ್ಲಿ ಕೇವಲ 27 ರನ್ ನೀಡಿ ಮೂರು ವಿಕೆಟ್ ಪಡೆದರು. ಖಲೀಲ್ ಅಹಮದ್ ಎರಡು, ಹಾರ್ದಿಕ್ ಪಾಂಡ್ಯಾ ಮತ್ತು ಭುವನೇಶ್ವರ್ ತಲಾ ಒಂದು ವಿಕೆಟ್ ಪಡೆದರು.