Advertisement

ದೇಶದ 70ನೇ ಸ್ವಾತಂತ್ರ್ಯ ಸಂಭ್ರಮ ಶ್ರೀಲಂಕಾದಲ್ಲಿ ತ್ರಿಕೋನ ಸರಣಿ

06:25 AM Nov 19, 2017 | Team Udayavani |

ಕೊಲಂಬೊ: ದೇಶದ 70ನೇ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಮುಂದಿನ ವರ್ಷದ ಮಾರ್ಚ್‌ ತಿಂಗಳಲ್ಲಿ ಶ್ರೀಲಂಕಾ ತ್ರಿಕೋನ ಕ್ರಿಕೆಟ್‌ ಸರಣಿಯೊಂದನ್ನು ಆಯೋಜಿಸಲು ತೀರ್ಮಾನಿಸಿದೆ. ಆತಿಥೇಯ ಲಂಕಾದ ಜತೆ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಪಾಲ್ಗೊಳ್ಳುತ್ತಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಪ್ರಕಟನೆ ತಿಳಿಸಿದೆ.

Advertisement

ಮಾ. 8ರಿಂದ 20ರ ತನಕ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಾಗುವುದು. ಪ್ರತಿಯೊಂದು ತಂಡ ಉಳಿದೆರಡು ತಂಡಗಳ ವಿರುದ್ಧ 2 ಪಂದ್ಯಗಳನ್ನಾಡಿದ ಬಳಿಕ ಫೈನಲ್‌ ನಡೆಯಲಿದೆ.

ಇದಕ್ಕೆ “ನಿದಹಾಸ್‌ ಟ್ರೋಫಿ’ ಎಂದು ಹೆಸರಿಡಲಾಗಿದೆ. 1988ರಲ್ಲಿ ಶ್ರೀಲಂಕಾ ಸ್ವಾತಂತ್ರ್ಯ ಸಂಭ್ರಮದ 50ನೇ ವರ್ಷಾಚರಣೆಯ ವೇಳೆಯೂ “ನಿದಹಾಸ್‌ ಟ್ರೋಫಿ’ ತ್ರಿಕೋನ ಸರಣಿಯೊಂದನ್ನು ನಡೆಸಲಾಗಿತ್ತು. ಅಂದು ಶ್ರೀಲಂಕಾ ಜತೆ ಪಾಲ್ಗೊಂಡ ಉಳಿದೆರಡು ತಂಡಗಳೆಂದರೆ ಭಾರತ ಮತ್ತು ನ್ಯೂಜಿಲ್ಯಾಂಡ್‌. ಇದರಲ್ಲಿ ಭಾರತ ಚಾಂಪಿಯನ್‌ ಆಗಿತ್ತು.

“ಮುಂದಿನ ವರ್ಷ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷವಾಗಲಿದೆ. ಇದೊಂದು ಸುದೀರ್ಘ‌ ಪಯಣ, ಸಂಭ್ರಮದ ಗಳಿಗೆ. ನಮ್ಮ ನೆರೆಯ ರಾಷ್ಟ್ರಗಳೂ ಹೆಚ್ಚು-ಕಡಿಮೆ ಸ್ವಾತಂತ್ರ್ಯ ಪಡೆದು ಇಷ್ಟೇ ವರ್ಷವಾಗುತ್ತದೆ. ನಮ್ಮ ಖುಷಿಯಲ್ಲಿ ಇವರೂ ಭಾಗಿಯಾಗಲಿ ಎಂದುದು ದೇಶವಾಸಿಗಳ ಆಶಯ’ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ತಿಲಂಗ ಸುಮತಿಪಾಲ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next