Advertisement

ಭಾರತ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ ವೇಳಾಪಟ್ಟಿ ಅಂತಿಮ

11:25 PM May 27, 2020 | mahesh |

ಮೆಲ್ಬರ್ನ್: ವರ್ಷಾಂತ್ಯದ ಭಾರತ-ಆಸ್ಟ್ರೇಲಿಯ ನಡುವಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯೊಂದನ್ನು ಸ್ಥಳೀಯ ಮಾಧ್ಯಮವೊಂದು ಪ್ರಕಟಿಸಿದೆ. ಅದರಂತೆ ಡಿ. 3ರಿಂದ ಬ್ರಿಸ್ಬೇನ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. “ಕ್ರಿಕೆಟ್‌ ಆಸ್ಟ್ರೇಲಿಯ’ದ ಸಿಎಒ ಕೆವಿನ್‌ ರಾಬರ್ಟ್ಸ್ ಇದನ್ನು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ .

Advertisement

ಈ ಸರಣಿಯಲ್ಲಿ 4 ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು. ದ್ವಿತೀಯ ಟೆಸ್ಟ್‌ ಡಿ. 11ರಿಂದ ಅಡಿಲೇಡ್‌ನ‌ಲ್ಲಿ ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಪ್ರಕಾರ ಇದು ಹಗಲು-ರಾತ್ರಿ ಪಂದ್ಯವಾಗುವ ಸಾಧ್ಯತೆ ಇದೆ. ಸಂಪ್ರದಾಯದಂತೆ ಮೆಲ್ಬರ್ನ್ನಲ್ಲಿ ಡಿ. 26ರಿಂದ ಬಾಕ್ಸಿಂಗ್‌ ಡೇ ಟೆಸ್ಟ್‌ ಆರಂಭವಾದರೆ, ನ್ಯೂ ಇಯರ್‌ ಟೆಸ್ಟ್‌ ಪಂದ್ಯ ಜ. 3ರಿಂದ ಸಿಡ್ನಿಯಲ್ಲಿ ಶುರುವಾಗಲಿದೆ.

ಆಸ್ಟ್ರೇಲಿಯಕ್ಕೆ ತೆರಳಿದ ಬಳಿಕ ಭಾರತದ ಸದಸ್ಯರಿಗೆ ಯಾವುದೇ ಕ್ವಾರಂಟೈನ್‌ ಇಲ್ಲ ಎಂಬುದಾಗಿ ಕ್ರಿಕೆಟ್‌ ಆಸ್ಟ್ರೇಲಿಯ ಸ್ಪಷ್ಟಪಡಿಸಿದೆ. ಹಾಗೆಯೇ “ಜೈವಿಕ ಸುರಕ್ಷತಾ ಸ್ಟೇಡಿಯಂ’ಗಳ ಪ್ರಸ್ತಾವವನ್ನೂ ಮಾಡಲಾಗಿಲ್ಲ. ಎಷ್ಟು ಮಂದಿ ವೀಕ್ಷಕರಿಗೆ ಅವಕಾಶ ನೀಡಬೇಕೆಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next