Advertisement
ಪುಟಿನ್ ಆದೇಶದ ಹಿನ್ನೆಲೆಯಲ್ಲಿ ತಕ್ಷಣವೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಕರೆಯಬೇಕೇ ಎಂಬ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆದಿತ್ತು. ಭಾರತ, ಚೀನಾ ಮತ್ತು ಯುಎಇ ಸಭೆಯಿಂದ ದೂರ ಉಳಿದವು. ರಷ್ಯಾ ಮಾತ್ರ ಸಾಮಾನ್ಯ ಅಧಿವೇಶನ ನಡೆಸಬೇಕು ಎಂಬ ನಿರ್ಣಯದ ವಿರುದ್ಧವಾಗಿ ಮತ ಹಾಕಿದೆ.
Related Articles
Advertisement
ದಶಕಗಳಲ್ಲೇ ಮೊದಲು:193 ಮಂದಿ ಸದಸ್ಯರು ಇರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅತ್ಯಂತ ತುರ್ತು ಎಂಬ ಕಾರಣಕ್ಕಾಗಿ ದಶಕಗಳ ಬಳಿಕ ಇದೇ ಮೊದಲ ಬಾರಿಗೆ ನಡೆಯಲಿದೆ. ನಿಮ್ಮವರ ಸುರಕ್ಷತೆಗಾಗಿ ನಮಗೆ ಬೆಂಬಲ ನೀಡಿ
“ನಮ್ಮ ದೇಶದಲ್ಲಿರುವ ನಿಮ್ಮವರ ಸುರಕ್ಷತೆಗಾಗಿ ನಮಗೆ ಬೆಂಬಲ ನೀಡಿ’. ಹೀಗೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಉಕ್ರೇನ್ ಪ್ರತಿನಿಧಿ ಸರ್ಗಿ ಕೆಸ್ಟೆಲಿಸ್ಟಾ ಹೇಳಿದ್ದಾರೆ. ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ನೇತೃತ್ವದ ನಿಯೋಗ ಸಭೆಯಿಂದ ಹೊರನಡೆದ ಬಳಿಕ ಮಾತನಾಡಿದ ಸರ್ಗಿ ಕೆಸ್ಟೆಲಿಸ್ಟಾ, “ಕೆಲವೇ ರಾಷ್ಟ್ರಗಳು ರಷ್ಯಾ ನಮ್ಮ ಮೇಲೆ ಸಾರಿರುವ ಯುದ್ಧಕ್ಕೆ ಬೆಂಬಲ ನೀಡುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ. ಉಕ್ರೇನ್‌ನಲ್ಲಿ ಇರುವ ಭಾರತದ ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿ ಇರಿಸಿಕೊಂಡು ಬೆಂಬಲ ನೀಡಬೇಕು’ ಎಂದಿದ್ದಾರೆ.