Advertisement

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಭಾರತ ‘ಎ’ ತಂಡಕ್ಕೆ 134 ರನ್‌ ಗೆಲುವು

10:55 PM Feb 04, 2024 | Team Udayavani |

ಅಹ್ಮದಾಬಾದ್‌: ಸ್ಪಿನ್ನರ್‌ಗಳಾದ ಶಮ್ಸ್‌ ಮುಲಾನಿ ಮತ್ತು ಸರನ್ಸ್‌ ಜೈನ್‌ ಅವರ ನಿಖರ ದಾಳಿಯ ನೆರವಿನಿಂದ ಭಾರತ “ಎ’ ತಂಡವು ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಮೂರನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 134 ರನ್ನುಗಳ ಜಯ ಸಾಧಿಸಿದೆ. ಈ ಗೆಲುವಿನಿಂದ ಭಾರತ “ಎ’ ತಂಡವು ಮೂರು ಪಂದ್ಯಗಳ ಈ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

Advertisement

ಗೆಲ್ಲಲು 403 ರನ್‌ ಗಳಿಸುವ ಗುರಿ ಪಡೆದ ಲಯನ್ಸ್‌ ತಂಡವು ಮುಲಾನಿ ಮತ್ತು ಸರನ್ಸ್‌ ಅವರ ದಾಳಿಗೆ ತತ್ತರಿಸಿ 268 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಮುಂಬಯಿಯ ಸ್ಪಿನ್ನರ್‌ ಮುಲಾನಿ 60 ರನ್ನಿಗೆ 5 ವಿಕೆಟ್‌ ಉರುಳಿಸಿದರೆ ಸರನ್ಸ್‌ ಜೈನ್‌ 50 ರನ್ನಿಗೆ ಮೂರು ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next