Advertisement

ಕೋವಿಡ್ ಲಸಿಕೆ ನೀಡಿಕೆಯಲ್ಲಿ ಜಗತ್ತಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ

12:16 AM Feb 08, 2021 | Team Udayavani |

ಹೊಸದಿಲ್ಲಿ: ಕೊರೊನಾ ಲಸಿಕೆ ನೀಡಿಕೆಯಲ್ಲಿ ಜಗತ್ತಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇದು ವರೆಗೆ 53,04,546 ಮಂದಿಗೆ ಲಸಿಕೆ ನೀಡಲಾಗಿದೆ.

Advertisement

ಜ. 16ರಂದು ಲಸಿಕೆ ನೀಡಿಕೆ ಆರಂಭಿಸಿದ ಬಳಿಕ ಶರವೇಗದಲ್ಲಿ ಇಂಥ ಸಾಧನೆ ಮಾಡಿರುವುದು ಹೆಗ್ಗಳಿಕೆಯೇ ಸರಿ. ಮೊದಲೆರಡು ಸ್ಥಾನಗಳಲ್ಲಿ ಅಮೆ ರಿಕ, ಇಂಗ್ಲಂಡ್‌ ಇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಕಾರ್ಯಾನುಷ್ಠಾನ ಮಾಡುತ್ತಿರುವುದ ರಿಂದ ಈ ಸಾಧನೆ ಮಾಡಲಾಗಿದೆ ಎನ್ನು ವುದು ಆರೋಗ್ಯ ಇಲಾಖೆ ಪ್ರತಿಪಾದನೆ.

ಅತೀ ಕಡಿಮೆ ಸಾವು
ದೇಶದಲ್ಲಿ ಸೋಂಕಿನಿಂದಾಗಿ ದಿನ ವಹಿ ಸಂಭವಿಸುವ ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ರವಿವಾರ 78ಕ್ಕಿಳಿ ದಿದೆ. ಈ ತಿಂಗಳಲ್ಲಿ ಸತತ ಮೂರನೇ ಬಾರಿಗೆ ಇಂಥ ಬೆಳವಣಿಗೆಯಾಗುತ್ತಿದೆ. ಒಂಬತ್ತು ತಿಂಗಳುಗಳಿಂದ ಹೀಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಾವಿನ ಸಂಖ್ಯೆ ದಾಖಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next