Advertisement

ವಿಮಾನ ಹಾರಾಟ ಶುರುವಾದರೂ ಸದ್ಯಕ್ಕೆ ಊಟವಿಲ್ಲ: ಇಂಡಿಗೋ ನಿರ್ಧಾರ

09:13 AM Apr 12, 2020 | Hari Prasad |

ಹೊಸದಿಲ್ಲಿ: ಲಾಕ್‌ ಡೌನ್‌ ಮುಕ್ತಾಯವಾಗಿ ಮತ್ತೆ ವಿಮಾನ ಯಾನ ಶುರುವಾದ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಪ್ರಯಾಣಿಕರಿಗೆ ಆಹಾರ ನೀಡದೇ ಇರಲು ಇಂಡಿಗೋ ವಿಮಾನ ಯಾನ ಸಂಸ್ಥೆ ನಿರ್ಧರಿಸಿದೆ. ಇದರ ಜತೆಗೆ ಸ್ವಚ್ಛತೆಯ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

Advertisement

ಸಂಸ್ಥೆಯ ಸಿಇಒ ರೊನೊಜೊಯ್‌ ದತ್ತ ನೌಕರರಿಗೆ ಕಳಿಸಿದ ಇ ಮೇಲ್‌ ಸಂದೇಶದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಜತೆಗೆ ಪ್ರತೀ ವಿಮಾನ ತನ್ನ ಇಷ್ಟು ದಿನ ವಿಮಾನ ಹಾರಾಟದ ಕುರಿತಾದ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೆವು.

ಇನ್ನು ಮುಂದೆ ವಿಮಾನವನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು, ಕ್ಯಾಬಿನ್‌ನಲ್ಲಿ ಶುಚಿತ್ವ ಕಾಪಾಡಲು ಆಹಾರ ಸರಬರಾಜನ್ನೂ ತಡೆ ಹಿಡಿಯುವುದರ ಜತೆಗೆ ಹಲವು ಮಾರ್ಪಾಡುಗಳನ್ನು ಸಂಸ್ಥೆಯು ತನ್ನ ಯಾನದ ಸಂದರ್ಭದಲ್ಲಿ ಅಳವಡಿಸಿಕೊಳ್ಳಲಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next