Advertisement

ಸ್ವಾತಂತ್ರ್ಯ ದಿನ ಪ್ರಜಾಪ್ರಭುತ್ವದ ಸುದಿನ; ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯೋಣ

05:36 PM Aug 16, 2020 | Karthik A |

ಭಾರತ ದೇಶ ಮತ್ತು ಭಾರತೀಯರನ್ನು ಬ್ರಿಟಿಷರ ಆಳ್ವಿಕೆ ದಾಸ್ಯ ಸಂಕೋಲೆಯಿಂದ ವಿಮುಕ್ತಿಗೊಳಿಸಲು ನಿರಂತರ ಚಳವಳಿ, ಸತ್ಯಾಗ್ರಹ ನಡೆಸಿದ ಚಾರಿತ್ರಿಕ ಘಟನೆಯೇ ಸ್ವಾತಂತ್ರ್ಯ ಹೋರಾಟ.

Advertisement

ಭಾರತ್‌ ಮಾತಾಕಿ ಜೈ ಎಂಬ ಸ್ವಾಭಿಮಾನದ ಘೋಷ ವಾಕ್ಯ ದೇಶದ ತುಂಬಾ ಮೊಳಗಿತ್ತು.

ದಣಿವರಿಯದೆ ಹೋರಾಟಕ್ಕೆ ಇಳಿದ ಕೆಚ್ಚೆದೆಯಿಂದ ಪ್ರಾಣ ಸಮರ್ಪಿಸಿದ ರಾಷ್ಟ್ರ ನಾಯಕರ ಸ್ವಾಭಿಮಾನದ ಹೋರಾಟವಾಗಿತ್ತು ಸ್ವಾತಂತ್ರ್ಯ ಸಂಗ್ರಾಮ.

ದೇಶಕ್ಕಾಗಿ ಹೋರಾಡಿ ಮಡಿದ ಭಾರತಾಂಬೆಯ ವೀರ ಪುತ್ರರನ್ನು ಸ್ಮರಿಸಿ ಹೆಮ್ಮೆಯಿಂದ ಪ್ರಜೆಗಳು ಗೌರವ ಸಲ್ಲಿಬೇಕು.

ಸ್ವಾತಂತ್ರ್ಯದ ವಿಜಯವನ್ನು ಸಂಭ್ರಮಿಸುವ ಉದ್ಗಾರದ ಕೂಗು ಎಲ್ಲೆಡೆ ಪಸರಬೇಕು.

Advertisement

ಬ್ರಿಟಿಷರ ದುರಾಡಳಿತವನ್ನು ತೊಲಗಿಸಿ ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ ಬರೋಬ್ಬರಿ 73 ವರ್ಷಗಳು ತುಂಬಿವೆ. ಇಂದು 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿ 1947ರ ಹೋರಾಟದ ಕ್ಷಣಗಳನ್ನು ಮೆಲುಕು ಹಾಕುವುದು ಅತ್ಯಂತ ಪ್ರಸ್ತುತ. ಆ ವಿಜಯೋತ್ಸವದ ಸಂಭ್ರಮದಲ್ಲಿ ಇಡೀ ನಾಡು ಮುಂದಡಿಯಿಟ್ಟಿದೆ.

ಪ್ಲಾಸೀ ಕದನದ ನೂರು ವರ್ಷಗಳ ಬಳಿಕ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ( ಸಿಪಾಯಿ ದಂಗೆ) ಕಿಡಿ ಕಾರಿತು. ಆಂಗ್ಲರ ದಬ್ಟಾಳಿಕೆಯ ವಿರುದ್ಧ ಸಿಪಾಯಿಗಳು ಬ್ರಿಟಿಷ್‌ ಸಾಮ್ರಾಜ್ಯಶಾಹಿ ವಿರುದ್ಧ ತಿರುಗಿಬಿದ್ದು ಪ್ರತಿಭಟಿಸಿದರೂ ವ್ಯವಸ್ಥಿತವಾದ ಯೋಜನೆಯಿಲ್ಲದೆ ದಂಗೆ ಬ್ರಿಟಿಷರಿಂದ ಹತ್ತಿಕ್ಕಲ್ಪಟ್ಟಿತು. ಸಿಪಾಯಿ ದಂಗೆ ವಿಫ‌ಲವಾದ ಮೇಲೆ, ಭಾರತೀಯ ನಾಯಕರ ಸಂದೇಶಗಳನ್ನು ಗೌರವಿಸಿದ ದೇಶದ ವಿದ್ಯಾವಂತ, ಯುವಕರು, ಇಡೀ ಜನ ಸಮೂಹ ಎಚ್ಚೆತ್ತುಕೊಂಡು ಸಂಘಟಿತರಾಗಿ ಹೋರಾಟಕ್ಕಿಳಿದರು.

1885ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮೊದಲು ಬ್ರಿಟಿಷ್‌ ಸಾಮ್ರಾಜ್ಯದ ಅಧೀನದಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. 20ನೇ ಶತಮಾನದ ಆರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್‌ ದಬ್ಟಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಯಿತು. ಮಹಾತ್ಮಾ ಗಾಂಧೀಜಿ, ಬಾಲ ಗಂಗಾಂಧರ ತಿಲಕ, ಲಾಲಾ ಲಜಪತರಾಯ, ಆ್ಯನಿ ಬೆಸೆಂಟ್‌ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸಿದರು. 1818 ಹಾಗೂ 1922ರ ನಡುವಿನ ಅವಧಿಯಲ್ಲಿ ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

1930ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್‌ 1942ರಲ್ಲಿ ಬ್ರಿಟಿಷರೇ “ಭಾರತ ಬಿಟ್ಟು ತೊಲಗಿ’ ಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು. ಬ್ರಿಟಿಷ್‌ ಆಡಳಿತವನ್ನು ಕೊನೆಗೊಳಿಸಲು 1942ರಲ್ಲಿ ಸುಭಾಷ್‌ ಚಂದ್ರ ಬೋಸ್‌ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫ‌ಲವಾಯಿತು. ಎರಡನೇ ಮಹಾಯುದ್ಧದ ಅನಂತರ ಈ ಎಲ್ಲ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗೂ ಪಾಕಿಸ್ಥಾನವೆಂದು ಇಬ್ಭಾಗಿಸುವ ದೇಶ ವಿಭಜನೆಯ ಬೆಲೆ ತೆತ್ತ ಭಾರತವು 1947ರ ಆಗಸ್ಟ್‌ 14ರ ಮಧ್ಯರಾತ್ರಿ ದಿಲ್ಲಿಯ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿ. ಬ್ರಿಟಿಷ್‌ ಆಡಳಿತ ತೊಲಗಿಸಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು.

ಪ್ರಜಾಪ್ರಭುತ್ವ
ಸೃಜನಶೀಲ ವೈಚಾರಿಕತೆ ಬುದ್ಧಿ ಜೀವಿಗಳಾದ ಭಾರತೀಯ ಪ್ರಜೆಗಳ ಬದುಕಿಗೆ ಒಂದು ಅಗತ್ಯ ನೀತಿ ನಿಯಮಗಳು ರೂಪಿಸಲ್ಪಟ್ಟವು. ದೇಶದ ಭದ್ರಬುನಾದಿ ಜತೆಗೆ ರಾಷ್ಟ್ರ ಸರ್ವೋತೋಮುಖ ಬೆಳವಣೆಗಾಗಿ ವ್ಯವಸ್ಥಿತ ಆಡಳಿತ ನಿಯಮಗಳು ರೂಪಿಸಿದ ಕಾರಣದಿಂದ ಹುಟ್ಟಿಕೊಂಡ ವ್ಯವಸ್ಥಿತ ಪದವೇ ಪ್ರಜಾಪ್ರಭುತ್ವ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರವೇ ಜಾರಿಗೆ ಬಂದ ಸೂಕ್ತ ಆಡಳಿತ ರಂಗವೇ ಶ್ರೇಷ್ಠ ಪ್ರಜಾಪ್ರಭುತ್ವ ಪರಿಕಲ್ಪನೆ ಎನಿಸುತ್ತದೆ ಎಂದು ಅಬ್ರಹಾಂ ಲಿಂಕನ್‌ ವ್ಯಾಖ್ಯಾನಿಸಿದ್ದಾರೆ.

ನಮ್ಮ ದೇಶ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಜಾಪ್ರಭುತ್ವ ಮೂಲ ಅಂಶಗಳು ಎತ್ತಿಹಿಡಿಯುವುದು ಸಂವಿಧಾನದ ಆಶಯಗಳು ವಿಫ‌ಲವಾಗದಂತೆ ಎಚ್ಚರಿಕೆ ವಹಿಸುವುದು ಇಂದಿನ ನವ ಭಾರತದಲ್ಲಿ ಯುವಕರ ಕೈಯಲ್ಲಿದೆ. ಭಾರತಕ್ಕೆ ಸಿಕ್ಕ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವವವು ಕೇವಲ ಒಂದು ದಿನದ ಆಚರಣೆಯಾಗಬಾರದು ಅರ್ಥ ಪೂರ್ಣವಾಗಿ ಆಚರಿಸೋಣ. ಭಾರತವು ಪ್ರಪಂಚದ ಬಲಿಷ್ಠ ರಾಷ್ಟ್ರ ಮಾಡುವಲ್ಲಿ ಎಲ್ಲರೂ ಸಂಕಲ್ಪ ಮಾಡೋಣ.

ಲಕ್ಷ್ಮೀ ಬಿ., ಕಲಬುರಗಿ ವಿಶ್ವವಿದ್ಯಾಲಯ

 

Advertisement

Udayavani is now on Telegram. Click here to join our channel and stay updated with the latest news.

Next