Advertisement

ಸ್ವಾತಂತ್ರ್ಯಕ್ಕಾಗಿ ಮಹನೀಯರ ತ್ಯಾಗ, ಬಲಿದಾನ

01:07 PM Aug 16, 2020 | Suhan S |

ಮೈಸೂರು: ಹಲವು ಮಹನೀಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ವ್ಯರ್ಥ ಮಾಡಬಾರದು ಎಂದು ಮೈವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌ ತಿಳಿಸಿದರು.

Advertisement

ಮೈವಿವಿಯ ಕ್ರಾಫ‌ರ್ಡ್‌ ಹಾಲ್‌ ಮುಂಭಾಗ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಸಂಪನ್ಮೂಲಭರಿತ ರಾಷ್ಟ್ರ. ಹೀಗಾಗಿ ಬ್ರಿಟಿಷರು, ಡಚ್ಚರು, ಫ್ರೆಂಚರು ನಮ್ಮನ್ನುಆಳಿದ್ದಾರೆ. ಆದರೆ, ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫ‌ಲವಾಗಿ ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ರಾಷ್ಟ್ರದ ಪ್ರಗತಿಗೆ ಹಲ ವಾರು ಮಹನೀಯರು ಕೊಡುಗೆ ನೀಡಿದ್ದಾರೆ. ಅವರೆನ್ನೆಲ್ಲಾ ಇಂದು ನೆನಪು ಮಾಡಿಕೊಳ್ಳಬೇಕಿದೆ. ಶತಮಾನ ಪೂರೈಸಿ ರುವ ಮೈಸೂರು ವಿವಿ ಉನ್ನತ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.

ಕೌಶಲ್ಯ ರೂಢಿಸಿಕೊಳ್ಳಿ: ಕೌಶಲ್ಯಗಳನ್ನು ಯುವಶಕ್ತಿ ರೂಢಿಸಿಕೊಳ್ಳಬೇಕು. ಉದ್ಯೋಗವನ್ನು ಬೇಡುವ ಬದಲು ಅದನ್ನು ನೀಡಲು ಸಿದ್ಧರಿರಬೇಕು. ಕೋವಿಡ್ ಕಾಲಘಟ್ಟದಲ್ಲೂ ನಾವೆಲ್ಲ ಒಂದಾಗಿ ಮುಂದಡಿ ಇಡುತ್ತಿದ್ದೇವೆ. ಆತ್ಮನಿರ್ಭರ ಪ್ರಧಾನಿಯವರ ಕನಸಿನ ಕೂಸು. ಅದರಂತೆ ಭಾರತ ಸ್ವಾವಲಂಬನೆ ಕಡೆ ಹೆಜ್ಜೆ ಹಾಕಬೇಕಿದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಇದಕ್ಕೆ ಹಲವಾರು ಜನ ತ್ಯಾಗ, ಬಲಿದಾನ ನೀಡಿದ್ದಾರೆ. ಹಾಗಾಗಿ ಅದನ್ನು ವ್ಯರ್ಥ ಮಾಡಿಕೊಳ್ಳದೆ ಮುಂದೆ ಸಾಗೋಣ ಎಂದು ಸಲಹೆ ನೀಡಿದರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವ, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಿಟ ವಿಮಲಾ ಬ್ರಾಗ್ಸ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next