Advertisement
ಒಂದೆಡೆ ಬ್ಯಾಂಕ್‌ನೌಕರರ ಮುಷ್ಕರ, ಮತ್ತೊಂದೆಡೆ ಅಂಚೆ ನೌಕರರ ಮುಷ್ಕರವಿದ್ದರೂ ಹಣಕಾಸು ವವ್ಯವಹಾರ ಕಡಿಮೆ ಯಾಗಿತ್ತು. ಕೆಲವೆಡೆ ಅಂಚೆ ಬಟವಾಡೆಯಾಗದೇ ಜನರು ತೊಂದರೆಯನ್ನೂ ಅನುಭವಿಸಿರುವುದು ತಿಳಿದು ಬಂದಿದೆ. ಬಜಪೆ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ 6 ಉಪಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಪಡುಪೆರಾರ, ಕೊಳಂಬೆ, ಅದ್ಯಪಾಡಿ, ಪೇಜಾವರ, ಕಳವಾರು, ಕೆಂಜಾರು ಇದರಲ್ಲಿ ಈಗಾಗಲೇ ಮೂರು ಉಪಅಂಚೆ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಒಟ್ಟು 21 ಉದ್ಯೋಗಿಯಲ್ಲಿ 5 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ.
ಕಿನ್ನಿಗೋಳಿ ಹಾಗೂ ಐಕಳ ಕೇಂದ್ರ ಕಚೇರಿಯ ವ್ಯಾಪ್ತಿಯಲ್ಲಿನ ಪುನರೂರು, ನಡುಗೋಡು, ಎಳತ್ತೂರು, ಏಳಿಂಜೆ, ಕೊಲ್ಲೂರು ಗ್ರಾಮೀಣ ಅಂಚೆ ಕಚೇರಿಗಳು ಮುಚ್ಚಿದ್ದವು. ಇದ ರಿಂದ ಈ ವ್ಯಾಪ್ತಿಯ ಲ್ಲಿ ಕಾಗದ ಪತ್ರ, ಮನಿಯಾರ್ಡರ್, ಪಾರ್ಸೆಲ್
ಗಳು ಬಟವಾಡೆ ಆಗದೆ ಬಾಕಿ ಉಳಿದಿದೆ. ಒಂದಡೆಯಲ್ಲಿ ಬ್ಯಾಂಕ್ ನೌಕರರ ಮುಷ್ಕರ ಇನ್ನೊಂದಡೆ ಗ್ರಾಮೀಣ ಅಂಚೆ ಕಚೇರಿಗಳು ಮುಷ್ಕರ ನಡೆಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಮೂಲ್ಕಿ: ಅಂಚೆ ಸೇವೆ ನಿರಾಂತಕ
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಗಾಮೀಣ ಪ್ರದೇಶದ ಅಂಚೆ ಸಿಬಂದಿ ಮುಷ್ಕರ ಬಿಸಿ ಈ ವರೆಗೆ ಮೂಲ್ಕಿಯ ಅಂಚೆ ಉಪ ಕಚೇರಿಯ ವ್ಯಾಪಿಯಲ್ಲಿರುವ ಎಲ್ಲಾ ಬ್ರಾಂಚ್ ಉಪ ಕಚೇರಿಗಳ ಸೇವೆಯಲ್ಲಿ ಯಾವುದೇ ಆತಂಕ ಇಲ್ಲದೆ ಸಾರ್ವಜನಿಕರಿಗೆ ಅಂಚೆ ಸೇವೆ ಲಭ್ಯವಾಗುತ್ತಿದೆ. ಕಾರ್ನಾಡು ಸದಾಶಿವ ನಗರ, ಕಾರ್ನಾಡು,ಪಂಜನಡ್ಕ, ಕರ್ನಿರೆ,ಬಳ್ಕುಂಜೆ , ಅತಿಕಾರಿ ಬೆಟ್ಟು, ಕೆಂಚನಕೆರೆ, ಚಿತ್ರಾಪು,ಕಿಲ್ಪಾಡಿ ಮುಂತಾದೆಡೆಗಳ ಉಪ ಕಚೇರಿಯ ಸೇವೆಗಳು ಎಂದಿನಂತೆ ಯಾವುದೇ ವ್ಯತ್ಯಯ ಇಲ್ಲದೆ ನಡೆಯುತ್ತಿದೆ ಎಂದು ಅಂಚೆ ಮೂಲಗಳು ತಿಳಿಸಿವೆ.