Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡ ನಿಗದಿತ 20 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್‌ಗಳ ಪೇರಿಸಿದರೆ, ಜಿಂಬಾಬ್ವೆ ತಂಡವು 20 ಓವರ್‌ನಲ್ಲಿ 6ವಿಕೆಟ್ ನಷ್ಟಕ್ಕೆ 159 ರನ್‌ಗಳಿಸಲಷ್ಟೇ ಶಕ್ತವಾಯಿತು. ಗಿಲ್, ಜೈಸ್ವಾಲ್, ಗಾಯಕ್ವಾಡ್ ಭಾರತದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಮೊತ್ತ ಕಲೆಹಾಕಲು ನೆರವಾದರೆ, ವೇಗದ ಬೌಲರ್‌ಗಳಾದ ಆವೇಶ್ ಖಾನ್ , ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ಮಿಂಚಿದರು.
Related Articles
ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶುಭ್‌ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಿಂದಲೇ ಹೊಡಿ ಬಡಿ ಆಟಕ್ಕೆ ಮುಂದಡಿ ಇಟ್ಟರು. ಗಿಲ್-ಜೈಸ್ವಾಲ್ ಜೋಡಿಯು ತಂಡದ ಮೊತ್ತವು ೮ ಓವರ್‌ನಲ್ಲಿ 67ರನ್ ಗಳಿಗೆ ತಲುಪಿದ್ದಾಗ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ಜೈಸ್ವಾಲ್ 27 ಎಸೆತದಲ್ಲಿ 36ಗಳಿಸಿದ್ದರು. ನಾಯಕ ಶುಭಮನ್ ಗಿಲ್ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 49 ಎಸೆತದಲ್ಲಿ66 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ನಾಯಕನ ಆಟವಾಡಿದರು. ಕಳೆದ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ್ದ ಅಭಿಷೇಕ್ ಶರ್ಮಾ 10 ರನ್‌ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ಎರಡನೇ ಟಿ-20 ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್ ಈ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 28 ಎಸೆತಕ್ಕೆ 49 ರನ್‌ಗಳಿಸಿ ಅರ್ಧಶತಕದ ಗಡಿಯಂಚಿಗೆ ಬಂದಾಗ ಔಟಾಗಿ ನಿರಾಶೆ ಅನುಭವಿಸಿದರು.
Advertisement
ಎರಡು ತಂಡಗಳಲ್ಲೂ ಬದಲಾವಣೆಮೂರನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ನಿರೀಕ್ಷೆಯಂತೆ ಸಾಕಷ್ಟು ಬದಲಾವಣೆಗಳ ಮಾಡಿದ್ದು. ಟಿ20 ವಿಶ್ವಕಪ್ ವಿಜೇತ ತಂಡದ ಆಟಗಾರರು ಜಿಂಜಾಬ್ವೆಯಲ್ಲಿ ತಂಡವನ್ನು ಸೇರಿಕೊಂಡಿದ್ದು, ಅವರಿಗೆ ಅವಕಾಶ ನೀಡುವ ಸಲುವಾಗಿ ಭಾರತ ತಂಡದಲ್ಲಿ 4 ಬದಲಾವಣೆಗಳ ಮಾಡಲಾಗಿದೆ. ಅದರಂತೆ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಕಣಕ್ಕೆ ಇಳಿದಿದ್ದರೆ, ಮುಖೇಶ್ ಕುಮಾರ್ ಬದಲಿಗೆ ಖಲೀಲ್ ಅಹ್ಮದ್ಗೆ ಅವಕಾಶ ನೀಡಲಾಗಿತ್ತು. ಕಳೆದೆರಡು ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿದ್ದ ಧ್ರುವ್ ಜುರೇಲ್, ರಿಯಾನ್ ಪರಾಗ್, ಸಾಯಿ ಸುದರ್ಶನ್ ಈ ಪಂದ್ಯದಿಂದ ಹೊರಗುಳಿದಿದ್ದರು. ಅದೇ ಸಮಯದಲ್ಲಿ, ಜಿಂಬಾಬ್ವೆ ತಂಡವು ಕೂಡ ಎರಡು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದಿತ್ತು. ಐದು ಪಂದ್ಯಗಳ ಸರಣಿಯಲ್ಲಿ ಮೂರನೇ ಪಂದ್ಯ ಭಾರತ ಜಯ ಗಳಿಸುವ ಮೂಲಕ ಸರಣಿಯಲ್ಲಿ ೨-೧ರಿಂದ ಮುನ್ನಡೆ ಸಾಧಿಸಿದೆ.