Advertisement
ಈ ಸಂದರ್ಭದಲ್ಲಿ ಮಾತಾಡಿದ ಟೆಂಬ ಬವುಮ, “ವಿಶ್ವಕಪ್ ತಯಾರಿಗೆ ಇದೊಂದು ಅತ್ಯುತ್ತಮ ಸರಣಿಯಾಗಿದೆ. ಭಾರತದ ಸತತ ಗೆಲುವಿನ ವಿಶ್ವದಾಖಲೆಯನ್ನು ತಪ್ಪಿಸಲಿದ್ದೇವೆ’ ಎಂದರು.
Related Articles
Advertisement
ಭಾರತ-ದಕ್ಷಿಣ ಆಫ್ರಿಕಾ ಈವರೆಗೆ 15 ಟಿ20 ಪಂದ್ಯಗಳಲ್ಲಿ ಎದುರಾಗಿವೆ. ಭಾರತ 9, ದಕ್ಷಿಣ ಆಫ್ರಿಕಾ 6 ಪಂದ್ಯಗಳನ್ನು ಜಯಿಸಿವೆ.
ಸೀನಿಯರ್‌ಗಳಿಗೆ ವಿಶ್ರಾಂತಿ :
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗಾಗಿ ಭಾರತ ಅನೇಕ ಮಂದಿ ಸೀನಿ ಯರ್ ಆಟಗಾರರಿಗೆ ವಿಶ್ರಾಂತಿ ನೀಡಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಇವರಲ್ಲಿ ಪ್ರಮುಖರು. ಇವರ ಗೈರಲ್ಲಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ತಂಡಕ್ಕೆ ವಾಪಸಾಗಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ ವೇಗಿಗಳಾದ ಉಮ್ರಾನ್ ಮಲಿಕ್, ಆರ್ಷದೀಪ್ ಸಿಂಗ್ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಜೂ. 5ರಂದು ಭಾರತ ತಂಡ ಹೊಸದಿಲ್ಲಿಗೆ ಆಗಮಿಸಲಿದೆ.
ಅನುಭವಿಗಳ ತಂಡ :
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡ ಟಿ20 ಸ್ಪೆಷಲಿಸ್ಟ್ ಆಟಗಾರರನ್ನೇ ಹೊಂದಿದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನಗೈದ ಅನೇಕ ಕ್ರಿಕೆಟಿಗರು ತಂಡದಲ್ಲಿದ್ದಾರೆ. ಲಕ್ನೋ ಪರ ಆಡಿದ ಕ್ವಿಂಟನ್ ಡಿ ಕಾಕ್ (508 ರನ್), ಗುಜರಾತ್ ತಂಡದ ಡೇವಿಡ್ ಮಿಲ್ಲರ್ (481 ರನ್), ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ ಐಡನ್ ಮಾರ್ಕ್‌ರಮ್ (381 ರನ್) ಹರಿಣಗಳ ಪಡೆಯ ಅಪಾಯಕಾರಿ ಆಟಗಾರರು. ಕಾಗಿಸೊ ರಬಾಡ, ತಬ್ರೇಜ್ ಶಮಿÕ, ಕೇಶವ್ ಮಹಾರಾಜ್ ಭಾರತದ ಟ್ರ್ಯಾಕ್‌ನಲ್ಲಿ ಘಾತಕ ಬೌಲಿಂಗ್ ಪ್ರದರ್ಶಿಸುವ ಸಾಧ್ಯತೆ ಇದೆ. ಎರಡೂ ತಂಡಗಳ ಆಟಗಾರರು ತಮ್ಮ ಹೊಟೇಲ್‌ನಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗಿದೆ. ಈ ಸರಣಿಯಲ್ಲಿ ಯಾವುದೇ ಬಯೋ ಬಬಲ್ ನಿರ್ಬಂಧ ಇರುವುದಿಲ್ಲ. 2020ರ ಕೊರೊನಾ ಬಳಿಕ ಭಾರತದಲ್ಲಿ ನಡೆಯುವ ಜೈವಿಕ ಸುರಕ್ಷ ವಲಯರಹಿತ ಅಂತಾರಾಷ್ಟ್ರೀಯ ಸರಣಿ ಇದಾಗಿದೆ.