Advertisement
ರಾಂಚಿ ಪಂದ್ಯದಲ್ಲಿ ಭಾರತದ ಅನೇಕ ಸಮಸ್ಯೆಗಳು ಗೋಚರಕ್ಕೆ ಬಂದವು. ಇದರಲ್ಲಿ ಮುಖ್ಯವಾದುದು, ಡೆತ್ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ತೋರ್ಪಡಿಸಿದ ಲೈನ್-ಲೆಂತ್ ಇಲ್ಲದ ಬೌಲಿಂಗ್. ಪರಿಣಾಮ, ಅಂತಿಮ ಓವರ್‌ನಲ್ಲಿ 27 ರನ್ ಸೋರಿ ಹೋಯಿತು. 21 ರನ್ ಅಂತರದ ಫಲಿತಾಂಶದಲ್ಲಿ ಅರ್ಷದೀಪ್ ಅವರ ಈ ದುಬಾರಿ ಬೌಲಿಂಗೇ ಟರ್ನಿಂಗ್ ಪಾಯಿಂಟ್ ಆಗಿತ್ತೆಂದೇ ಹೇಳಬೇಕು.
Related Articles
Advertisement
ಬೇಕಿದೆ ಭದ್ರ ಬುನಾದಿದೊಡ್ಡ ಮೊತ್ತದ ಚೇಸಿಂಗ್ ವೇಳೆ ಅಗ್ರ ಕ್ರಮಾಂಕದ ಬ್ಯಾಟರ್ ಭದ್ರ ಬುನಾದಿ ನಿರ್ಮಿಸುವುದು ಅತ್ಯಗತ್ಯ. ಆದರೆ ರಾಂಚಿಯಲ್ಲಿ ಭಾರತಕ್ಕೆ ಇದು ಸಾಧ್ಯವಾಗಲಿಲ್ಲ. 15 ರನ್ ಆಗುವ ಷ್ಟರಲ್ಲಿ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ ಪೆವಿಲಿಯನ್ ಸೇರಿಯಾಗಿತ್ತು. ಭಾರತಕ್ಕೆ ಪಂದ್ಯಕ್ಕೆ ಮರಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನು ನಿರ್ಮಾಣ ಮಾಡಿಟ್ಟರು. ಆದರೂ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಒಂದು ಹಂತದ ಹೋರಾಟ ಸಂಘಟಿ ಸುವಲ್ಲಿ ಯಶಸ್ವಿಯಾದರು. ಸೋಲಿನ ಅಂತರವನ್ನು ತಗ್ಗಿಸಿದರು. ಆದರೆ ಅಗ್ರ ಕ್ರಮಾಂಕದ ಆಟಗಾರರು ಕ್ರೀಸ್ ಆಕ್ರಮಿಸಿಕೊಳ್ಳುವುದು ಅತೀ ಅಗತ್ಯ. ಪ್ರಚಂಡ ಫಾರ್ಮ್ ನಲ್ಲಿರುವ ಗಿಲ್, ಮುನ್ನುಗ್ಗಿ ಬೀಸಬಲ್ಲ ಇಶಾನ್, ಇನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಒಗ್ಗಿಕೊಳ್ಳದ ತ್ರಿಪಾಠಿ ಸಿಡಿದು ನಿಲ್ಲಬೇಕಿದೆ. ಜಯದ ರುಚಿ ಕಂಡ ಕಿವೀಸ್
ನ್ಯೂಜಿಲ್ಯಾಂಡ್‌ಗೆ ಇದೀಗ ಗೆಲುವಿನ ರುಚಿ ಸಿಕ್ಕಿದೆ. ಟಿ20ಯಲ್ಲಿ ತಮ್ಮದು ಬೇರೆಯೇ ಶೈಲಿಯ ಆಟ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಮುಖ್ಯವಾಗಿ ಓಪನರ್ ಡೇವನ್ ಕಾನ್ವೇ ಫಾರ್ಮ್ ಗೆ ಮರಳಿದ್ದಾರೆ. 6ನೇ ಕ್ರಮಾಂಕದ ಬಳಿಕವೂ ಮುನ್ನುಗ್ಗಿ ಬ್ಯಾಟ್ ಬೀಸಬಲ್ಲ ಆಟಗಾರರು ಇಲ್ಲಿ ದ್ದಾರೆ. ಆಲ್‌ರೌಂಡರ್‌ಗಳ ದೊಡ್ಡ ಪಡೆಯೇ ಇದೆ. ಒಬ್ಬರಲ್ಲದಿದ್ದರೆ ಮತ್ತೂಬ್ಬರು ಆಡುತ್ತಾರೆ. ಬ್ರೇಸ್‌ವೆಲ್ ರನೌಟಾದರೇನಂತೆ, ತಾನಿದ್ದೇನೆ ಎಂದು ಡ್ಯಾರಿಲ್ ಮಿಚೆಲ್ ತೋರಿಸಿ ಕೊಟ್ಟರು. ನಾಳೆ ಇನ್ನೊಬ್ಬರು ಸಿಡಿಯಬಹುದು ಎಂಬ ಎಚ್ಚರದಲ್ಲಿ ಭಾರತ ಇರಬೇಕು. ಏಕೆಂದರೆ ಲಕ್ನೋ ಟ್ರ್ಯಾಕ್ ಬ್ಯಾಟಿಂಗ್ ಸ್ನೇಹಿ ಎಂಬುದನ್ನು ಬಹಳಷ್ಟು ಸಲ ಸಾಬೀತುಪಡಿಸಿದೆ.