Advertisement
ಪಂದ್ಯದ 4ನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್ ಮೊತ್ತವನ್ನು 466ಕ್ಕೆ ಏರಿಸಿ ರೂಟ್ ಬಳಗಕ್ಕೆ 126 ಓವರ್‌ಗಳಲ್ಲಿ 368 ರನ್ನುಗಳ ಗೆಲುವಿನ ಗುರಿ ನೀಡಿದೆ. ಓವಲ್‌ನಲ್ಲಿ 4ನೇ ಸರದಿಯ ಯಶಸ್ವಿ ಚೇಸಿಂಗ್ ಮೊತ್ತ 263 ರನ್ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕಿದೆ.
Related Articles
Advertisement
99 ರನ್ ಹಿನ್ನಡೆ ಬಳಿಕ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 270 ರನ್ ಗಳಿಸಿ ಹೋರಾಟದ ಸೂಚನೆ ನೀಡಿದ್ದ ಭಾರತ, ರವಿವಾರದ ಮೊದಲ ಅವಧಿಯಲ್ಲಿ 3 ಬಿಗ್ ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ರವೀಂದ್ರ ಜಡೇಜ (17), ನಾಯಕ ವಿರಾಟ್ ಕೊಹ್ಲಿ (44) ಮತ್ತು ಅಜಿಂಕ್ಯ ರಹಾನೆ (0) ವಿಕೆಟ್ ಪತನವಾದಾಗ ಇಂಗ್ಲೆಂಡಿಗೆ ಮೇಲುಗೈ ಲಭಿಸುವ ಸಾಧ್ಯತೆ ಗೋಚರಿಸಿತು. ಲಂಚ್ ವೇಳೆ ಭಾರತ 6 ವಿಕೆಟಿಗೆ 329 ರನ್ ಗಳಿಸಿತ್ತು. ಆದರೆ ರಿಷಭ್ ಪಂತ್ ಮತ್ತು ಶಾದೂìಲ್ ಠಾಕೂರ್ ಸೇರಿಕೊಂಡು 7ನೇ ವಿಕೆಟಿಗೆ ಭರ್ತಿ 100 ರನ್ ಪೇರಿಸಿ ಭಾರತವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.
ಪಂತ್ ಮತ್ತು ಠಾಕೂರ್ ಇಬ್ಬರೂ ಅರ್ಧ ಶತಕ ಬಾರಿಸಿ ಇಂಗ್ಲೆಂಡ್ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ಪಂತ್ ಕೊಡುಗೆ ಭರ್ತಿ 50 ರನ್. 106 ಎಸೆತಗಳ ಈ ಆಟದಲ್ಲಿ 4 ಬೌಂಡರಿ ಸೇರಿತ್ತು.
ಮೊದಲ ಸರದಿಯಲ್ಲಿ 57 ರನ್ ಹೊಡೆದು ಟಾಪ್ ಸ್ಕೋರರ್ ಆಗಿದ್ದ ಠಾಕೂರ್ ಮತ್ತೂಂದು ಸ್ಫೋಟಕ ಇನ್ನಿಂಗ್ಸ್ ಮೂಲಕ ಮತ್ತೂಮ್ಮೆ ತಮ್ಮ ಬ್ಯಾಟಿಂಗ್ ಸಾಹಸವನ್ನು ತೆರೆದಿಟ್ಟರು. ಅದೇ ಬಿರುಸಿನಲ್ಲಿ ಸಾಗಿದ ಠಾಕೂರ್ 72 ಎಸೆತಗಳಿಂದ 60 ರನ್ ಸಿಡಿಸಿದರು.
ರವಿವಾರದ ಮೊದಲ ಅವಧಿಯಲ್ಲಿ ಕ್ರಿಸ್ ವೋಕ್ಸ್ ಸತತ ಓವರ್‌ಗಳಲ್ಲಿ ಅವಳಿ ಹೊಡೆತ ನೀಡಿದಾಗ ಭಾರತ ಒತ್ತಡಕ್ಕೆ ಸಿಲುಕಿತು. ಮೊದಲು ಜಡೇಜ ವಿಕೆಟ್ ಕಿತ್ತ ವೋಕ್ಸ್, ಮುಂದಿನ ಓವರ್‌ನಲ್ಲಿ ರಹಾನೆ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು.