ಗದಗ: ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು. ಬಾಹ್ಯ ಜಗತ್ತಿನಲ್ಲಿ ನಡೆಯುವ ಘಟನೆ, ಮಾಹಿತಿ ಸಂಶೋಧನಾ ಕಾರ್ಯ, ಭೂಗರ್ಭ ಸಂಪತ್ತಿನ ರಕ್ಷಣೆಗಾಗಿ ಮಕ್ಕಳಲ್ಲಿ ಚಿಂತನೆ ಮೂಡಿಸುವುದರ ಜೊತೆಗೆ ಅವರಲ್ಲಿ ಜ್ಞಾನದ ಹಸಿವು ಹೆಚ್ಚಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ 28ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೇಂದ್ರ ವಿಷಯ ಸುಸ್ಥಿರ ಜೀವನಕ್ಕಾಗಿ ವಿಜ್ಞಾನ ಕುರಿತು ವಿಜ್ಞಾನ ಶಿಕ್ಷಕರಾಗಿ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಭಾಷೆ-ಗಡಿ ತಂಟೆಗೆ ಬಂದ್ರೆ ಸಹಿಸಲ್ಲ : ಈಶ್ವರಪ್ಪ
ಸಾ.ಶಿ. ಇಲಾಖೆ ಉಪನಿರ್ದೇಶಕ ಜಿ. ಬಸವಲಿಂಗಪ್ಪ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಚಾರ್ಯ ಎಸ್.ಡಿ.ಗಾಂಜಿ ಮಾತನಾಡಿ, ಶಿಕ್ಷಕರು ತಮ್ಮ ವರ್ಗದ ಕೋಣೆಗಳಲ್ಲಿ ಮಕ್ಕಳ ಎದುರು ಬೋಧನೋಪಕರಣಗಳನ್ನು ಪ್ರದರ್ಶಿಸಿ, ಅವರಲ್ಲಿ ಕಲಿಕೆಯ ಕುತೂಹಲವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ರಮೇಶ ಮೇರವಾಡೆ, ಎಚ್. ಎಫ್. ಪೂಜಾರ ಮಾತನಾಡಿದರು.ಬಿಇಒ ಎಂ.ಎ. ರಡ್ಡೇರ, ಎಸ್.ಎಸ್. ಕೆಳದಿಮಠ, ಉಪನ್ಯಾಸಕ ಎಚ್.ಡಿ.ರಡ್ಡೇರ, ಎಸ್.ಎಸ್. ಕುಲಕರ್ಣಿ ಇದ್ದರು. ಜಿಲ್ಲಾ ಸಂಚಾಲಕ ಜಗದೀಶ ಯಾಳಗಿ ಸ್ವಾಗತಿಸಿದರು. ಎಂ.ಎಚ್. ಸವದತ್ತಿ ನಿರೂಪಿಸಿದರು. ನಿರಂಜನ ಹಿರೇಮಠ ವಂದಿಸಿದರು.