Advertisement
ಬಮ್ಮಾಪುರ ಓಣಿ ಅರಳಿಕಟ್ಟಿ ಕುಟುಂಬ 5 ದಶಕದಿಂದ ಗೌರಿ ಹುಣ್ಣಿಮೆಗಾಗಿ ಸಕ್ಕರೆ ಗೊಂಬೆ ತಯಾರಿಸುವ ಉದ್ಯೋಗವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಪ್ರತಿ ವರ್ಷ 50 ಕ್ವಿಂಟಲ್‌ಗೂ ಹೆಚ್ಚು ಸಕ್ಕರೆಗೊಂಬೆ ತಯಾರಿಸುತ್ತಿರುವ ಈ ಕುಟುಂಬ ಸಗಟು ಹಾಗೂ ಚಿಲ್ಲರೆ ವ್ಯಾಪಾರವನ್ನೂ ಮಾಡುತ್ತಿದೆ.
Related Articles
Advertisement
ಗುಣಮಟ್ಟದಲ್ಲಿ ರಾಜಿ ಇಲ್ಲ: ಬಿಳಿ, ಹಳದಿ, ಗುಲಾಬಿ ಹಾಗೂ ಕೇಸರಿ ಬಣ್ಣಗಳಲ್ಲಿ ರಥ, ಮಂಟಪ, ವಿವಿಧ ಪ್ರಾಣಿಗಳು, ನಂದಿ, ಆನೆ ಸೇರಿದಂತೆ ವಿವಿಧ ಗೊಂಬೆಗಳನ್ನು ತಯಾರಿಸಲಾಗುತ್ತದೆ. ಸಕ್ಕರೆಗೊಂಬೆ ಕುರಿತು ಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಬಂದು ಪರಿಶೀಲಿಸಿ ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನುತ್ತಾರೆ ತಯಾರಕರು. àಡಿ ಬೇಡಿಕೆ ಸಲ್ಲಿಸುತ್ತಾರೆ. ಆದ್ಯತೆಗೆ ಅನುಗುಗುಣವಾಗಿ ಪೂರೈಸಲಾಗುತ್ತದೆ.
ಸಗಟು ವ್ಯಾಪಾರದ ನಂತರ ಚಿಲ್ಲರೆ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಜನರು ಇಲ್ಲಿಂದಲೇ ಖರೀದಿಸುತ್ತಾರೆ. ಗುಣಮಟ್ಟದಲ್ಲಿ ರಾಜಿ ಇಲ್ಲ: ಬಿಳಿ, ಹಳದಿ, ಗುಲಾಬಿ ಹಾಗೂ ಕೇಸರಿ ಬಣ್ಣಗಳಲ್ಲಿ ರಥ, ಮಂಟಪ, ವಿವಿಧ ಪ್ರಾಣಿಗಳು, ನಂದಿ, ಆನೆ ಸೇರಿದಂತೆ ವಿವಿಧ ಗೊಂಬೆಗಳನ್ನು ತಯಾರಿಸಲಾಗುತ್ತದೆ.
ಸಕ್ಕರೆಗೊಂಬೆ ಕುರಿತು ಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಬಂದು ಪರಿಶೀಲಿಸಿ ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನುತ್ತಾರೆ ತಯಾರಕರು. ಕಳೆದ 50 ವರ್ಷದಿಂದ ಸಕ್ಕರೆಗೊಂಬೆ ತಯಾರಿಸುತ್ತಿದ್ದು, ಆರಂಭದಲ್ಲಿ 5 ರೂ.ಗಳಿಂದ ಆರಂಭಗೊಂಡ ಸಕ್ಕರೆ ಗೊಂಬೆ ಮಾರಾಟ ಇಂದು 100 ರೂ.ಗಳಿಗೆ ಬಂದು ನಿಂತಿದೆ. ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಗೊಂಬೆ ತಯಾರಿಸಲಾಗುವುದು.
-ಶಿವಾನಂದ ಅರಳಿಕಟ್ಟಿ, ಸಕ್ಕರೆ ಗೊಂಬೆ ತಯಾರಕರು
ಬಸವರಾಜ ಹೂಗಾರ