Advertisement

ಸರಣಿ ಹಬ್ಬಗಳ ಹಿನ್ನೆಲೆ ಕೋವಿಡ್‌ ಸೋಂಕು ಹೆಚ್ಚಳವಾಗುವ ಸಾಧ್ಯತೆ: ಗುಪ್ತ

01:46 PM Aug 12, 2021 | Team Udayavani |

ಬೆಂಗಳೂರು: ಸರಣಿ ಹಬ್ಬಗಳ ಹಿನ್ನೆಲೆ ಕೋವಿಡ್‌ ಸೋಂಕು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಹೊಸ ನಿಯಮಗಳ ವಿಸ್ತೃತ ಆದೇಶ ಶೀಘ್ರವೇ ಹೊರ ಬೀಳಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು.

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಾಲು ಸಾಲು ಹಬ್ಬಗಳ ಆಚರಣೆ ಹಿನ್ನೆಲೆ
ಜನಜಂಗುಳಿ ಪ್ರದೇಶಗಳಿಗೆ ಭೇಟಿ ನೀಡುವುದನ್ನೇ ಕಡಿಮೆ ಮಾಡಬೇಕು. ಜತೆಗೆ, ದೇವಾಸ್ಥಾನ, ಮಾರುಕಟ್ಟೆಗೆ ಹೋಗುವುದನ್ನು ಕಡಿವಾಣ
ಹಾಕಬೇಕು. ಪೊಲೀಸ್‌, ಮಾರ್ಷಲ್‌, ಹೋಂ ಗಾರ್ಡ್‌ಗಳು ತಂಡ ಸಿದ್ಧವಾಗಿದೆ. ಜತೆಗೆ ಹೊಸ ನಿಯಮಗಳ ವಿಸ್ತ್ರತ ಆದೇಶ ಶೀಘ್ರವೇ ಹೊರ
ಬೀಳಲಿದೆ ಎಂದು ಆಯುಕ್ತರು ಹೇಳಿದರು.

ಮೂರನೇ ಅಲೆಯ ಆಗಮನದ ಬಗ್ಗೆ ತಜ್ಞರು ಈಗಾಗಲೇಎಚ್ಚರಿಸಿದ್ದಾರೆ.ಇನ್ನು,ಮುಖ್ಯಮಂತ್ರಿಗಳು ಸಹ ತಮ್ಮ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ,ಕಠಿಣ ಕ್ರಮ ಬೇಡವಾದರೆ ಕೋವಿಡ್‌ ನಿಯಮ ಜನರು ಪಾಲಿಸಬೇಕಾಗುತ್ತದೆ. ಜನರು ಸಹಕಾರ ಅತ್ಯಂತ ಮುಖ್ಯವಾಗಿದ್ದು, ಸೋಂಕು ಹೆಚ್ಚಳವಾಗದಂತೆ ಸ್ವಯಂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನೆಲಮಹಡಿ ತೆರಿಗೆ‌ ಸೇರಿದಂತೆ ಹಲವು ತೆರಿಗೆ ಕೈಬಿಡುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಈವರೆಗೂ ಪಾಲಿಕೆ ವಸೂಲಿ ಮಾಡಿದ ಹಣವನ್ನು
ವಾಪಸ್‌ ನೀಡುವಂತೆ ಹೈಕೋರ್ಟ್‌ ಸೂಚಿಸಿದ್ದು, ಆ ಕುರಿತು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆ: ಸಕ್ರೇಬೈಲು ಆನೆ ಬಿಡಾರದಲ್ಲಿ ವಿಶೇಷ ಪೂಜೆ

Advertisement

ಕನ್ನಡ ಪುಸ್ತಕ ನೀಡುವಂತೆ ಸುತ್ತೋಲೆ
ಬೆಂಗಳೂರು: ಬಿಬಿಎಂಪಿ ಸಭೆ – ಸಮಾರಂಭಗಳಲ್ಲಿ ಕಾಣಿಕೆಯ ಬದಲಾಗಿ ಕನ್ನಡ ಪುಸ್ತಕಗಳು ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ವಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ-ಸಮಾರಂಭಗಳಲ್ಲಿಹೂಗುಚ, ಹಾರ-ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆ ನೀಡಬಾರದೆಂದು ಹಾಗೂ ಅದರ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದೆಂದು ನಿರ್ದೇಶಿಸಲಾಗಿತ್ತು. ಸದ್ಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಸಭೆ-ಸಮಾರಂಭಗಳಲ್ಲಿಹೂಗುಚ, ಹಾರ-ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳು ನೀಡುವ ಶಿಷ್ಟಾಚಾರ ಸಂಪ್ರದಾಯವನ್ನುಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸುತ್ತಾ, ಕಾಣಿಕೆಗಳ ಬದಲಾಗಿ ಆಡಳಿತ ಭಾಷೆಯಾದ ಕನ್ನಡ ಪುಸ್ತಕಗಳನ್ನು ನೀಡಬಹುದಾಗಿರುತ್ತದೆ ಎಂದು ತಿಳಿಸಿದೆ. ಮೇಲ್ಕಂಡ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸು ವಂತೆ ಸೂಚಿಸುತ್ತಾ,ತಪ್ಪಿದ್ದಲ್ಲಿಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next