Advertisement

ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆ ಪುನರಾರಂಭಕ್ಕೆ ಹೆಚ್ಚಾದ ಬೇಡಿಕೆ

01:32 AM Dec 11, 2021 | Team Udayavani |

ಪುತ್ತೂರು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ ಅರ್ಜಿ ಸಲ್ಲಿಕೆಗೆ ನೀಡಿದ್ದ ಅವಧಿ ಪೂರ್ಣಗೊಳ್ಳುವ ಮೊದಲೇ ಪ್ರಕ್ರಿಯೆ ಸ್ಥಗಿತವಾಗಿದ್ದ ಕಾರಣ ಪುನಃ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ಸರಕಾರ ಇನ್ನೂ ಅಸ್ತು ಎಂದಿಲ್ಲ.

Advertisement

2019ರ ಮಾ. 16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ನಿಗದಿಪಡಿಸಲಾಗಿತ್ತು. ಮಾ. 10ರಿಂದ ಲೋಕಸಭೆ ಚುನಾವಣ ನೀತಿ ಸಂಹಿತೆ ಜಾರಿಗೊಂಡ ಕಾರಣ ಕೊನೆಯ 6 ದಿನಗಳಲ್ಲಿ ಅರ್ಜಿ ಸಲ್ಲಿಸಲು ಅಡ್ಡಿಯಾಗಿತ್ತು. ಆದ್ದರಿಂದ ಇಡೀ ಪ್ರಕ್ರಿಯೆ ಅರ್ಧಕ್ಕೆ ನಿಂತು ಬಿಟ್ಟಿತ್ತು.

ಈಗಾಗಲೇ ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮ-ಸಕ್ರಮ ಸಮಿತಿ ರಚಿಸಲಾಗಿದ್ದು ಅರ್ಜಿ ವಿಲೇ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ಈ ಹಿಂದೆ ಬಾಕಿ ಆಗಿರುವ ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಸರಕಾರ ಕಾಯ್ದೆಗೆ ತಿದ್ದುಪಡಿ ತಂದು, ಹೊಸ ಅಂತಿಮ ದಿನಾಂಕ ನಿಗದಿಪಡಿಸಿದ ಬಳಿಕವೇ ಅವರಿಗೆ ಅವಕಾಶ ದೊರೆಯಲಿದೆ.

ಇದನ್ನೂ ಓದಿ:ಮೊಟ್ಟೆ ಬದಲು ತಾಯಿ ಕೈಗೆ ದುಡ್ಡು ಕೊಡಿ: ಶೋಭಾ

ಸಕ್ರಮಕ್ಕೆ ಮೂರು ಅವಕಾಶ
1964ರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1991ರಲ್ಲಿ ತಿದ್ದುಪಡಿ ತಂದು ನಮೂನೆ-50ರಲ್ಲಿ ಆರು ತಿಂಗಳ ಕಾಲ ಅರ್ಜಿ ಸ್ವೀಕಾರ ನಡೆದಿತ್ತು. ಬಾಕಿ ಉಳಿದವರಿಗೆ 1998ರ ನ. 1ರಿಂದ 1999ರ ಎ. 30ರ ವರೆಗೆ ನಮೂನೆ- 53ರಲ್ಲಿ ಮತ್ತು 2018 ನವೆಂಬರ್‌ನಿಂದ ನಮೂನೆ -57ರಲ್ಲಿ ಅವಕಾಶ ನೀಡಲಾಗಿತ್ತು. ನಮೂನೆ 50 ಮತ್ತು 53ರಲ್ಲಿ ಉಭಯ ಜಿಲ್ಲೆಗಳಲ್ಲಿ 1,02,934 ಅರ್ಜಿದಾರರ 3.47 ಲಕ್ಷ ಎಕ್ರೆ ಅನಧಿಕೃತ ಸಾಗುವಳಿ ಭೂಮಿ ಸಕ್ರಮವಾಗಿದೆ. ದ.ಕ. ಜಿಲ್ಲೆಯಲ್ಲಿ ನಮೂನೆ 50ರಲ್ಲಿ 1,13,730 ಅರ್ಜಿ ಸಲ್ಲಿಕೆಯಾಗಿ, 46,577 ಮಂಜೂರಾತಿ, ನಮೂನೆ 53ರಲ್ಲಿ 1,11,387 ಅರ್ಜಿ ಸಲ್ಲಿಕೆಯಾಗಿ 32,725 ಮಂಜೂರಾತಿ, ಉಡುಪಿ ಜಿಲ್ಲೆಯಲ್ಲಿ ನಮೂನೆ 50ರಲ್ಲಿ 50,358 ಅರ್ಜಿ ಸಲ್ಲಿಕೆ, 11,927 ಮಂಜೂರಾತಿ, ನಮೂನೆ 53ರಲ್ಲಿ 58,453 ಅರ್ಜಿ ಸಲ್ಲಿಕೆಯಾಗಿದೆ.

Advertisement

ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-  57ರಲ್ಲಿ ಅರ್ಜಿ ಸಲ್ಲಿಕೆ ಪುನಾರರಂಭಿಸಬೇಕು ಎನ್ನುವ ಬೇಡಿಕೆಯ ಬಗ್ಗೆ ಸರಕಾರದ ಹಂತದಲ್ಲಿ ಪ್ರಯತ್ನ ನಡೆಯುತ್ತಿದೆ. ಕೆಲ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಬರಲಿದೆ.
– ಎಸ್‌.ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next