Advertisement
ಸಂಸದರು ಕೂಡ ಈ ಕುರಿತು ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರ ತಿರುವನ್ನು ಸಮರ್ಪಕಗೊಳಿಸಿ ಅಪಾಯ ತಡೆಯುವ ಕುರಿತು ಪ್ರಯತ್ನ ನಡೆಸಿದ್ದರು.
ಆದರೆ ಕಾಮಗಾರಿ ಕಂಪೆನಿ, ಹೆದ್ದಾರಿ ಪ್ರಾಧಿಕಾರದ ಸ್ಪಷ್ಟತೆ ದೊರೆಯದ ಕಾರಣ ಇದು ಅಪಾಯಕಾರಿ ತಿರುವಾಗಿ ಮಾರ್ಪಟ್ಟಿದೆ. ವಾರದಲ್ಲಿ ನಾಲ್ಕೈದು ಅಪಘಾತಗಳು ಇದೇ ಸ್ಥಳದಲ್ಲಿ ನಡೆಯುತ್ತಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದನ್ನೂ ಓದಿ:ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್ ಹಾರಾಟ
Related Articles
ಅವೈಜ್ಞಾನಿಕ ಕಾಮಗಾರಿಯಿಂದ ಒತ್ತಿನೆಣೆ ಪರಿಸರದಲ್ಲಿ ನಿರಂತರ ಅಪಘಾತ ನಡೆಯುತ್ತಿದೆ. ಈ ಕುರಿತು ಕಂಪೆನಿ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದ್ದು ಅಪಘಾತ ನಿಯಂತ್ರಣಕ್ಕೆ ತಿರುವು ಸರಿಪಡಿಸಬೇಕಾದ ಆವಶ್ಯಕತೆ ಇದೆ.
-ಸಂತೋಷ ಕಾಯ್ಕಿಣಿ,
ವೃತ್ತ ನಿರೀಕ್ಷಕರು ಬೈಂದೂರು
Advertisement