Advertisement

Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ

09:25 PM May 21, 2024 | Team Udayavani |

ತಿರುವನಂತಪುರಂ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಡ್ಡಿರುವ ಸವಾಲುಗಳ ಮಧ್ಯೆಯೇ ಕೇರಳದ ಎಡಪಕ್ಷಗಳ ಸರ್ಕಾರವು 2022-21ರಲ್ಲಿ 47,000 ಕೋಟಿ ರೂ. ಇದ್ದ ರಾಜ್ಯದ ಆದಾಯವನ್ನು 2023-24ರಲ್ಲಿ ದಾಖಲೆಯ 77,000 ಕೋಟಿ ರೂ.ಗೆ ಹೆಚ್ಚಿಸುವ ಲ್ಲಿ ಯಶಸ್ವಿಯಾಗಿದೆ ಎಂದು ಕೇರಳ ವಿತ್ತ ಸಚಿವ ಕೆ.ಎನ್‌.ಬಾಲಗೋಪಾಲ್‌ ತಿಳಿಸಿದ್ದಾರೆ.

Advertisement

ಕಳೆದ 3 ವರ್ಷಗಳಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲೇ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ರಾಜ್ಯ ವಿರೋಧಿ ನೀತಿಗಳಿಂದಾಗಿ ಆದಾಯವನ್ನು ಹೆಚ್ಚಿಸಿಕೊಳ್ಳದಿದ್ದರೆ ರಾಜ್ಯದ ಹಣಕಾಸು ಸ್ಥಿತಿ ಕುಸಿತವಾಗುತ್ತಿತ್ತು ಎಂದು ತಿಳಿಸಿರುವ ಅವರು, ತನ್ನ ಹಕ್ಕು ಪಡೆಯಲು ರಾಜ್ಯವು ಕೇಂದ್ರ ಸರ್ಕಾರ ದ ವಿರುದ್ಧ ಕಾನೂನು ಹೋರಾಟ ನಡೆಸಿತು. ಇದು ಇತರ ರಾಜ್ಯಗಳಿಗೂ ದಾರಿ ಒದಗಿಸಿತು ಎಂದು ತಮ್ಮ ಎಫ್ಬಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕರ್ನಾಟಕ ಕೂಡ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next