Advertisement

ಪಾಸ್‌ಪೋರ್ಟ್‌ ಸಂಖ್ಯೆ ಹೆಚ್ಚಳ: 66.3 ಲಕ್ಷ ಕರ್ನಾಟಕದ ಮಂದಿಗೆ ಪಾಸ್‌ಪೋರ್ಟ್‌

01:09 AM Dec 20, 2022 | Team Udayavani |

ಬೆಂಗಳೂರು: ಪ್ರಸ್ತುತ ದೇಶದ ಜನಸಂಖ್ಯೆಯಲ್ಲಿ ಶೇ. 7.2 ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಇವರಲ್ಲಿ ಹೆಚ್ಚಿನ ವರು ಕಳೆದ ಒಂದು ದಶಕದ ಅವಧಿಯಲ್ಲಿ ಪಾಸ್‌ಪೋರ್ಟ್‌ ಮಾಡಿಸಿಕೊಂಡವರು.

Advertisement

2022ರ ಡಿಸೆಂಬರ್‌ನ ಮಧ್ಯಭಾಗದವರೆಗಿನ ಅಂಕಿಅಂಶಗಳಂತೆ 9.6 ಕೋಟಿ ಭಾರತೀಯರು ಪಾಸ್‌ ಪೋರ್ಟ್‌ ಹೊಂದಿದ್ದು, ಕೆಲವೇ ತಿಂಗಳುಗಳಲ್ಲಿ ಇದು 10 ಕೋಟಿ ದಾಟುವ ಸಾಧ್ಯತೆಗಳಿವೆ. ಭಾರತೀಯ ವಿದೇಶಾಂಗ ಸಚಿ ವಾಲಯ ಈ ಮಾಹಿತಿ ನೀಡಿದೆ.

ಪಾಸ್‌ಪೋರ್ಟ್‌ ಹೊಂದಿರು ವವರಲ್ಲಿ ಕೇರಳ ಮತ್ತು ಮಹಾರಾಷ್ಟ್ರದವರದು ಸಿಂಹಪಾಲು. ಈ ಎರಡು ರಾಜ್ಯಗಳವರು ಒಟ್ಟು ಸಂಖ್ಯೆಯಲ್ಲಿ 2.2 ಕೋಟಿ ಇದ್ದಾರೆ. ಅನಂತರದ ಸ್ಥಾನಗಳಲ್ಲಿ ತ.ನಾಡು, ಉತ್ತರ ಪ್ರದೇಶ, ಪಂಜಾಬ್‌, ಗುಜರಾತ್‌ ಮತ್ತು ಕರ್ನಾಟಕದವರಿದ್ದಾರೆ.

ತಲಾದಾಯ ಹೆಚ್ಚಳ, ಶೈಕ್ಷಣಿಕ ಉನ್ನತಿ, ಉದ್ಯೋಗಾವಕಾಶಗಳು ಇತ್ಯಾದಿ ಕಾರಣಗಳಿಂದ ವಿದೇಶ ಯಾನ ಹೆಚ್ಚಿರುವುದರಿಂದ ಪಾಸ್‌ಪೋರ್ಟ್‌ ಹೆಚ್ಚಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next