Advertisement

ಬೆಳೆಯುತ್ತಿದೆ ಉಗ್ರರ ಪಾತಕದ ಜಾಡು

10:00 AM Aug 27, 2018 | Team Udayavani |

ಹೊಸದಿಲ್ಲಿ: ಆಘಾತಕಾರಿ ಬೆಳವಣಿಗೆ ಎಂಬಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆ ಗಳಿಗೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.ಅಷ್ಟೇ ಅಲ್ಲದೆ, ವಿಶ್ವಾದ್ಯಂತ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಕುಖ್ಯಾತಿ ಪಡೆದಿರುವ ಅಲ್‌ಖೈದಾವು ಕಣಿವೆ ರಾಜ್ಯದಲ್ಲಿ ಇತರೆ ಸಣ್ಣ ಪುಟ್ಟ ಸಂಘಟನೆ ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿದ್ದು, ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ನೀಡಿದ್ದಾರೆ.

Advertisement

2018ರಲ್ಲಿ ಸುಮಾರು 130 ಯುವಕರು ಈಗಾಗಲೇ ವಿವಿಧ ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದಾರೆ. 2010ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಯುವಕರು ಉಗ್ರವಾದದತ್ತ ಆಕರ್ಷಿತ ರಾಗಿದ್ದು ಇದೇ ಮೊದಲು. ಅದರಲ್ಲೂ ಬಹುತೇಕ ಯುವಕರು ಅಲ್‌ಖೈದಾ ದೊಂದಿಗೆ ನಂಟಿರುವ ಸಂಘಟನೆಗಳಿಗೆ ಸೇರಿಕೊಳ್ಳುತ್ತಿರುವುದು ಮತ್ತಷ್ಟು ಆತಂಕಕಾರಿ ಎನ್ನುತ್ತಾರೆ ಅಧಿಕಾರಿಗಳು. 

ಪ್ರಸಕ್ತ ವರ್ಷದ ಜು.31ರವರೆಗೆ 131 ಯುವಕರು ಉಗ್ರ ಸಂಘಟನೆಗಳಿಗೆ ಸೇರಿಕೊಂಡಿದ್ದು, ಆ ಪೈಕಿ ಹೆಚ್ಚಿನವರು ಶೋಪಿಯಾನ್‌ ಜಿಲ್ಲೆಯವರು ಎನ್ನಲಾ ಗಿ ದೆ. ಝಾಕೀರ್‌ ರಶೀದ್‌ ಭಟ್‌ ಅಲಿಯಾಸ್‌ ಝಾಕೀರ್‌ ಮೂಸಾ  ನೇತೃತ್ವದ ಅನ್ಸಾರ್‌ ಘಝತುಲ್‌ ಹಿಂದ್‌ ಎಂಬ ಗುಂಪಿಗೆ ಹೆಚ್ಚಿನ ಯುವಕರು ಸೇರಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಐಸಿಸ್‌ ಜತೆ ನಂಟಿರುವ ಐಎಸ್‌ಜೆಕೆ ಎಂಬ ಸಂಘಟನೆಗೂ ಹಲವು ಯುವಕರು  ಆಕರ್ಷಿತರಾಗಿದ್ದರೂ, ಅದರ ಮುಖ್ಯಸ್ಥ ದಾವೂದ್‌ ಸೋಫಿಯ ಹತ್ಯೆ ಬಳಿಕ, ಅದರ ಪ್ರಭಾವ ತಗ್ಗಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next